Dailyhunt Logo
  • Light mode
    Follow system
    Dark mode
    • Play Story
    • App Story
ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಅಂಗಡಿಗಳ ಮೇಲೆ ದಾಳಿ

ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಅಂಗಡಿಗಳ ಮೇಲೆ ದಾಳಿ

ಕೋಲಾರ, 12 ಅಕ್ಟೋಬರ್ (ಹಿ.ಸ.) : ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಕೆ.ಜಿ.ಎಫ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಅಧಿಕಾರಿಗಳು ಮತ್ತು ನಗರಸಭೆ ವತಿಯಿಂದ ಕೆ.ಜಿ.ಎಫ್ ನಗರಸಭೆ ವ್ಯಾಪ್ತಿಯ ಅಂಡ್ರಸನ್ಪೇಟೆಯಲ್ಲಿ ಕೋಟ್ಪ್ ಕಾಯ್ದೆ ಉಲ್ಲಂಘನೆಗಳ ವಿರುದ್ದ ದಾಳಿ ನಡೆಸಲಾಯಿತು.

ಕೋಟ್ಟಾ ಕಾಯ್ದೆ ಸೆಕ್ಷನ್ ೪ ಮತ್ತು ೬ರ ಅಡಿಯಲ್ಲಿ ೧೨ ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಿ ಸಾರ್ವಜನಿಕರಿಗೆ ಕೋಟ್ಪ್ ಕಾಯ್ದೆ ನಿಯಮಾವಳಿಗಳು ಮತ್ತು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ನೋಡಲ್ ಅಧಿಕಾರಿಗಳಾದ ಡಾ. ಜಗದೀಶ್ ಎಂ ಮಾತನಾಡಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ ಮಸಾಲ, ಹನ್ಸ್, ಜರ್ದಾ ಇತ್ಯಾದಿ ತಂಬಾಕು ಉತ್ಪನ್ನಗಳು ಮಾರಾಟ ಮಾಡಲು ಇನ್ನುಂದೆ ಕಡ್ಡಾಯವಾಗಿ ತಂಬಾಕು ಮಾರಾಟ ಪರವಾನಿಗೆ ಪಡೆಯ ಬೇಕಾಗಿರುತ್ತದೆ. ಇತ್ತೀಚೆಗೆ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ತಂಬಾಕು ಉತ್ಪನ್ನಗಳ ಮಾರಾಟ ಪರಾವಾನಿಗೆ ನೀತಿಯನ್ನು ಜಾರಿಗೆ ತಂದಿದ್ದು, ಅದರಂತೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಕಡ್ಡಾಯವಾಗಿ ತಂಬಾಕು ಮಾರಾಟ ಪರವಾನಿಗೆಯನ್ನು ಪಡೆಯಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ನಿಗಧಿತ ನಮೂನೆಯಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯಲ್ಲಿ ಅರ್ಜಿಸಲ್ಲಿಸುವುದು. ಅಧಿಕಾರಿಗಳು ತಪಾಸಣೆಗೆ ಬಂದಾಗ ಸಂಪೂರ್ಣ ಸಹಕಾರ ನೀಡುವುದು. ಕೋಟ್ಪ್ ಕಾಯ್ದೆಯ ಅನುಸಾರ ನಿಗಧಿತ ಸೈನೇಜ್ ಬೋರ್ಡುಗಳನ್ನು ಪ್ರದರ್ಶಿಸುವುದು. ಕೋಟ್ಟಾ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಅಫಿಡಿವೈಡ್ ಸಲ್ಲಿಸುವುದು.

ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ರೂ ೪೦೦೦ರೂಗಳ ದಂಡ ಹಾಗೂ ಮಾರಾಟ ಮುಂದುವರಿಸಿದರೆ ಮಾಲೀಕರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು. ಪುರಸಭೆ ಮತ್ತು ಪಟ್ಟಣಪಂಚಾಯ್ತಿ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ರೂ ೩೦೦೦ರೂಗಳು ದಂಡ ಹಾಗೂ ಮಾರಾಟ ಮುಂದುವರಿಸಿದರೆ ಮಾಲೀಕರ ವಿರುದ್ದ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಶೇಷ ದಾಳಿಯಲ್ಲಿ ಕೆ.ಜಿ.ಎಫ್ ನಗರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ಗೌರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸನ್ನ ಕುಮಾರ್, ರಮೇಶ್, ಜಿತೇಂದ್ರ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಮಹಮದ್.ಪಿ, ಮಂಜುನಾಥ ಜಿ.ಎನ್, ಪೊಲೀಸ್ ಪೇದೆ ರಾಜೇಂದ್ರ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada