Dailyhunt Logo
  • Light mode
    Follow system
    Dark mode
    • Play Story
    • App Story
ಕೊಪ್ಪಳ : 210ನೇ ದಿನದ ಬಲ್ಡೋಟ ತೊಲಗಿಸಿ ಧರಣಿ

ಕೊಪ್ಪಳ : 210ನೇ ದಿನದ ಬಲ್ಡೋಟ ತೊಲಗಿಸಿ ಧರಣಿ

ಕೊಪ್ಪಳ, 28 ಮೇ (ಹಿ.ಸ.) :

ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಗರಸಭೆ ಮುಂದೆ ನಡೆಯುತ್ತಿರುವ ಧರಣಿ 210 ನೇ ದಿನಗಳನ್ನು ಪೂರ್ಣಗೊಳಿಸಿತು.

ಅವಳಿ ನಗರದ ಜನರ ಆರೋಗ್ಯ ಹಾನಿ ಮಾಡಲು 54 ಸಾವಿರ ಕೋಟಿ ಹೂಡಿಕೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ಮುಂದಾದ ಬಲ್ಡೋಟ ಕುರಿತು ಗವಿಶ್ರೀಗಳು ಧರ್ಮಾದೇಶ ಮಾಡಿದಂತೆ ಈ ಹೂಡಿಕೆ ತಡೆದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕು.

ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ಭಾಗ ಬಾಧಿತವಾಗುತ್ತಿದ್ದು, ನಗರದ ಜನರ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಖಾತ್ರಿಪಡಿಸಸಬೇಕು. ಬಲ್ಡೋಟ ಕಂಪನಿಯು ಬಸಾಪುರ ಗ್ರಾಮ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದ್ದು ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು.

ತುಂಗಭದ್ರ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ.

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕಿ ಮಾಲಾ ಬಡಿಗೇರ, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ನಿವೃತ್ತ ಉಪನ್ಯಾಸಕರಾದ ಡಾ ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಎಸ್. ಮಹಾದೇವಪ್ಪ ಮಾವಿನಮಡು, ಚಾರಣ ಬಳಗದ ಸಿ.ಬಿ.ಪಾಟೀಲ್, ಅಣ್ಣಪ್ಪ ಬಾರಕೇರ, ತಿಪ್ಪಣ್ಣ ಹಾದಿಮನಿ, ಮಾನವ ಬಂಧುತ್ವ ವೇದಿಕೆಯ ಬೆಟ್ಟಪ್ಪ ಯತ್ನಟ್ಟಿ, ರಣದಪ್ಪ ಸುಂಕಣ್ಣನವರ, ಹೊನ್ನೂರಸಾಬ್ ನದಾಫ್, ಬಸವಂತಪ್ಪ ಚೌವಾಣ, ರಮೇಶ ಪಿ.ಬಿ ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada