ಸುದ್ದಿ
ಕುಲಶಾಸ್ತ್ರೀಯ ಅಧ್ಯಯನ ತಂಡಕ್ಕೆ ಹಾಲುಮತ ಸಮಾಜದವರು ಸರಿಯಾದ ಮಾಹಿತಿ ನೀಡಲು ಕರೆ

ಕೋಲಾರ,ನ.23(ಹಿ.ಸ): ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ಸಂಬಂಧ ಅಧ್ಯಯನ ನಡೆಸಲು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ತಂಡ ಜಿಲ್ಲೆಗೆ ಬರುತ್ತಿದ್ದು ಅವರೊಂದಿಗೆ ಸ್ಪಂದಿಸಿ ಸರಿಯಾದ ಮಾಹಿತಿ ನೀಡಿ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜುಮೌರ್ಯ ಮನವಿ ಮಾಡಿದರು.
ನಗರದ ಕನಕ ಮಂದಿರದಲ್ಲಿ ಕೋಲಾರ ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಹಮ್ಮಿಕೊಂಡ ಎಸ್ಟಿ ಮೀಸಲಾತಿಗೆ ಕುರುಬರನ್ನು ಸೇರಿಸುವ ಕುರಿತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕುರುಬ ಸಮಾಜದ ಆಚಾರ-ವಿಚಾರ, ಭಾμÉ, ಸಾಮಾಜಿಕ, ಶೈಕ್ಷಣಿಕ-ಆರ್ಥಿಕ ಸ್ಥಿತಿಗತಿ ಹಾಗೂ ಭೌಗೋಳಿಕ ಅಂಶಗಳ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನ ತಂಡ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ನೀಡುವುದರಿಂದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
22 ಜಿಲ್ಲೆಯಲ್ಲಿ ಅಧ್ಯಯನ ಪುರ್ಣಗೊಂಡಿದ್ದು, 23ನೇ ಜಿಲ್ಲೆ ಕೋಲಾರಯಾಗಿದ್ದು ಮುಂದಿನ ದಿನಗಳಲ್ಲಿ ಅಧ್ಯಯನ ತಂಡ ಭೇಟಿ ನೀಡುವುದಾಗಿ ತಿಳಿಸಿದರು. ದೇಶದ ಮೂಲನಿವಾಸಿಗಳಾಗಿ, ಅಲೆಮಾರಿಗಳಾಗಿ ಪರಿಶಿಷ್ಟ ಪಂಗಡ ಮೀಸಲಾತಿ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜ ಬೀದರ್ ಮತ್ತು ಕೊಡಗು ಜಿಲ್ಲೆಗಳಲ್ಲಿ ಎಸ್ಟಿ ಮೀಸಲಾತಿಯನ್ನು ಹೊಂದಿದೆ. ಬ್ರಿಟಿಶರ ಕಾಲದಿಂದಲ್ಲೂ ಕುರಬ ಸಮಾಜ ಎಸ್ಟಿಯಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಪಾದಯಾತ್ರೆ ಮೂಲಕ ಬಂದು ಬೆಂಗಳೂರಿನಲ್ಲಿ 2021 ಫೆ.7ರಂದು ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.
ಸಂವಿಧಾನ ಬದ್ಧವಾಗಿ ಕುರುಬರ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಹಲವಾರು ರೀತಿಯಲ್ಲಿ ಮನವಿ ಮಾಡುತ್ತಿದ್ದರೂ ಸಹ ಸರಕಾರ ಯಾವುದೇ ಸ್ಪಂದನೆ ಸಿಗದೇ ಇರುವುದು ಮನಸ್ಸಿಗೆ ನೋವನ್ನುಂಟು ಮಾಡುತ್ತಿದೆ. ರಾಜ್ಯದಲ್ಲಿ ಕುರುಬರು ಸಹ ಮತದಾರರಾಗಿದ್ದು 30 ಜಿಲ್ಲೆಗಳಲ್ಲೂ ಶಾಸಕ ಸ್ಥಾನವನ್ನು ಗೆಲ್ಲಿಸಿಕೊಳ್ಳಲು ನಿರ್ಣಾಯಕರಾಗಿದ್ದಾರೆ. ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಮಗೆ, ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿμÁಧ ವ್ಯಕ್ತಪಡಿಸಿದರು.
ವಕೀಲ ಶ್ರೀನಿವಾಸ್ ಮಾತನಾಡಿ, ಎಸ್ಟಿಗೆ ಸೇರಿಸುವ ಸಲುವಾಗಿ ಹಾಲುಮತ ಮಹಾಸಭಾ ಪದಾಧಿಕಾರಿಗಳು ಋಣಾತ್ಮಕವಾಗಿ ಮಾತನಾಡದೆ ಧನಾತ್ಮಕವಾಗಿ ಸಮಾಜ ಬಂಧುಗಳಲ್ಲಿ ಅರಿವು ಮೂಡಿಸಬೇಕು. ಹತ್ತು ಕುರಿ ಕೂಗುವ ಮೂಲಕ ಸಿಂಹಘರ್ಜನೆ ಅಡಗಿಸಬಹುದು, ನೂರು ಕುರಿ ಕೂಗುವ ಮೂಲಕ ಸಿಂಹವನ್ನು ಓಡಿಸಬಹುದು ಎಂದು ಸಮಾಜದ ಶಕ್ತಿಯನ್ನು ವಿವರಿಸಿದರು.
ಹಾಲುಮತ ಮಹಾಸಭಾ ಕೋಲಾರ ಜಿಲ್ಲಾಧ್ಯಕ್ಷ ಎನ್.ಕೆ.ಗೋವಿಂದರಾಜು ಮಾತನಾಡಿ, ಮನೆಗೊಂದು ಮರ ನೆಡುವಂತೆ ನಮ್ಮ ಜಿಲ್ಲೆಯ ಕುರುಬ ಸಮಾಜದ ಪ್ರತಿಯೊಂದು ಮನೆಯಿಂದ ಒಬ್ಬರನ್ನು ಹಾಲುಮತದ ಸಿಪಾಯಿಯಾಗಿ ಬೆಳೆಸುವುದೇ ನಮ್ಮ ಗುರಿ ಮತ್ತು ಸಂಕಲ್ಪವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಕಾನೂನು ಸಲಹೆಗಾರ ಲೋಕೇಶ್ ಮೂರ್ತಿ, ರಾಜ್ಯ ಸಂಚಾಲಕರಾದ ಉಮೇಶ್ ಕುಂದನ್, ಜಗದೀಶ್, ರಮೇಶ್, ಶ್ರೀನಿವಾಸ್, ಗೌರವಾಧ್ಯಕ್ಷ ಸೊಣ್ಣೂರು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಮುರಳಿ, ಖಜಾಂಚಿ ರಮೇಶ್ ಬಾಬು, ಸ್ವಸ್ತಿಕ್ ಶಿವು, ಮಹಿಳಾ ಘಟಕ ಸದಸ್ಯೆ ಪ್ರೇಮಾ, ವಕೀಲರಾದ ಲಲಿತಮ್ಮ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀಲತಾ ರವರು ನಿರೂಪಿಸಿ, ಶಿಕ್ಷಕ ಮುನಿರತ್ನಯ್ಯ ರವರು ವಂದಿಸಿದರು.