Dailyhunt
ಮನೆಯಲ್ಲೇ ಯೋಗ : ಜಿಲ್ಲೆಯಾದ್ಯಂತ 5,000 ಜನರು ಏಕಕಾಲಕ್ಕೆ ಯೋಗಾಭ್ಯಾಸ

ಮನೆಯಲ್ಲೇ ಯೋಗ : ಜಿಲ್ಲೆಯಾದ್ಯಂತ 5,000 ಜನರು ಏಕಕಾಲಕ್ಕೆ ಯೋಗಾಭ್ಯಾಸ

ಚಿತ್ರದುರ್ಗ,ಜೂನ್ 21(ಹಿ.ಸ): ಜಿಲ್ಲಾ ಆಯುಷ್ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅವರ ಮಾರ್ಗದರ್ಶನಲ್ಲಿ ಜೂನ್ 21ರಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರ್ಕಾರದ ಆದೇಶ ಹಾಗೂ ಸೂಚನೆಯನ್ವಯ "ಸ್ವಾಸ್ಥ್ಯಕ್ಕಾಗಿ ಯೋಗ" ಎಂಬ ಧ್ಯೇಯವಾಕ್ಯದೊಂದಿಗೆ ಅಂತರ್‍ಜಾಲದ ಮೂಲಕ ಸೋಮವಾರ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಆಚರಿಸಲಾಯಿತು.

ಕೋವಿಡ್-19 ಇರುವ ಕಾರಣ ಬಹಿರಂಗ ಸಭೆ ಸಮಾರಂಭಗಳನ್ನು ಆಯೋಜಿಸಿದೇ "ಬಿ ವಿತ್ ಯೋಗ, ಬಿ ಹಟ್ ಹೋಮ್" ಎಂಬ ಧ್ಯೇಯವಾಕ್ಯದೊಂದಿಗೆ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಾರ್ವಜನಿಕರು ಹಾಗೂ ಯೋಗಾಸಕ್ತರು ಮನೆಯಿಂದಲೇ ಯೋಗಾಭ್ಯಾಸ ಮಾಡಲು ಪ್ರೇರೇಪಿಸಲಾಗಿತ್ತು.


ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ದೃಷ್ಠಿಯಿಂದ ಆಯುಷ್ ಇಲಾಖೆ ವತಿಯಿಂದ ಅಂತರ್ ಜಾಲ ಲಿಂಕ್‍ಗಳನ್ನು ಸೃಜಿಸಿ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ತಲುಪಿಸಲಾಗಿತ್ತು.

ಈ ಲಿಂಕ್‍ಗಳನ್ನು ಬಳಸಿಕೊಂಡು ಹಾಗೂ ವಿವಿಧ ಯೋಗಾಸಕ್ತ ಸಂಸ್ಥೆಗಳ ಲಿಂಕ್‍ಗಳನ್ನು ಬಳಸಿಕೊಂಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಸುಮಾರು 5,000 ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡಿದರು.

7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಜಿಲ್ಲೆಯ ಜಿಲ್ಲಾ ಆಯುಷ್ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ವಿವಿಧ ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಪತಂಜಲಿ ಯೋಗ ಸಮಿತಿ, ಮಹರ್ಷಿ ಯೋಗ ಸಮಿತಿ, ಈಶ್ವರೀಯ ಪ್ರಜಾಪಿತ ಬ್ರಹ್ಮಕುಮಾರೀಸ್, ನೆಹರು ಯುವ ಕೇಂದ್ರ, ಆರ್ಟ್ ಆಫ್ ಲೀವಿಂಗ್, ಚಿತ್ರದುರ್ಗ ಯೋಗಸಂಸ್ಥೆ, ರೋಟರಿ ಕ್ಲಬ್, ಸಿದ್ಧಿ ಸಮಾಧಿಯೋಗ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‍ಕ್ರಾಸ್, ಸರ್ಕಾರಿ ನೌಕರರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada