Wednesday, 16 Sep, 9.46 pm Hindusthan Samachar

ಸುದ್ದಿ
ಮರು ಮೌಲ್ಯ ಮಾಪನದ ನಂತರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಸಾಯಿ ಮೇಘನಾಗೆ ಸನ್ಮಾನ.

ಮರು ಮೌಲ್ಯ ಮಾಪನದ ನಂತರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ

ವಿದ್ಯಾರ್ಥಿನಿ ಸಾಯಿ ಮೇಘನಾಗೆ ಸನ್ಮಾನ.

ಕೋಲಾರ ಸೆ 16 (ಹಿ.ಸ) : ಮರು ಮೌಲ್ಯಮಾಪನದ ನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ್ಯಾಕ್ ಗಳಿಸಿರುವ ಕೋಲಾರದ ಬಿ.ಎಂ.ಎಸ್. ಶಾಲೆಯ ವಿದ್ಯಾರ್ಥಿನಿ ಸಾಯಿ ಮೇಘನಾ ರವರನ್ನು ಸನ್ಮಾನಿಸಲಾಯಿತು. ಮರು ಮೌಲ್ಯ ಮಾಪನದ ಮೊದಲು ಸಾಯಿ ಮೇಘನಾ 623 ಅಂಕಗಳನ್ನು ಗಳಿಸಿದ್ದರು. ಆದರೆ ಮೌಲ್ಯ ಮಾಪಕರು ಮಾಡಿದ ತಪ್ಪಿನಿಂದ ಮೇಘನಾ ರ್ಯಾಂಕ್‍ನಿಂದ ವಂಚಿತರಾಗಿದ್ದರು. ಮರು ಮೌಲ್ಯಮಾಪನದ ನಂತರ ಮೇಘನ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ರ್ಯಾಂಕ್‍ಗೆ ಭಾಜನರಗಿದ್ದಾರೆ.

ಮೇಘನಾ ರವರನ್ನು ಸನ್ಮಾನಿಸಿ ಮಾತನಾಡಿದಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಮ್ ಜಯರಾಮರೆಡ್ಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಂದೆ ತಾಯಿಗಳ ಆಶೋತ್ತರಗಳಿಗೆ ಸ್ಪಂದಿಸಬೇಕು. ಶಿಕ್ಷಕರು ನೀಡುವ ಬೋಧನೆ ಮನನ ಮಾಡಿಕೊಂಡು ಜ್ಞಾನ ದಾಸೋಹಿಗಳಾಗಬೇಕು ಆಗ ಮಾತ್ರ ಸಮಾಜ ತಮ್ಮನ್ನು ಮೆಚ್ಚುತ್ತದೆ ಈ ದಿಸೆಯಲ್ಲಿ ಕಲಿಕೆಯ ಪ್ರಕ್ರಿಯೆ ನಿರಂತರ ಆಗಬೇಕು ಎಂದು ಅಭಿಪ್ರಾಯಪಟ್ಟರು. ಶಾಲೆಯಲ್ಲಿ ನಡೆದ ಓಜೋನ್ ದಿನಾಚರಣೆಯಲ್ಲಿ ಸಾಯಿ ಮೇಘನಾ ರವರನ್ನು ಸನ್ಮಾನಿಸಿ ಮಾತನಾಡಿದರು.

ಶಾಲಾ ಆರಂಭದ ವಿದ್ಯಾಭ್ಯಾಸದಿಂದ ಹಿಡಿದು ಪ್ರತಿನಿತ್ಯ ಕಲಿಕೆಯ ಹಸಿವನ್ನು ಹೊಂದಿರಬೇಕು. ಶಿಕ್ಷಕರು ಆಗಿಂದಾಗ್ಗೆ ನೀಡುವ ಮಾರ್ಗದರ್ಶನವನ್ನು ಅರ್ಥೈಸಿಕೊಂಡು ಸಮಾಜ ಮೆಚ್ಚುವ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಓಜೋನ್ ಪದರ ಮುಖ್ಯ ಕಾರಣವಾಗಿದ್ದು ಇಂತಹ ದಿನಾಚರಣೆಯನ್ನು ಮಾಡುವ ಮೂಲಕ ವೈಜ್ಞಾನಿಕ ಚಿಂತನೆಯತ್ತಾ ವಿದ್ಯಾರ್ಥಿಗಳನ್ನು ಕೊಂಡೊಯ್ಯಬೇಕೆಂದು ಸಿ. ಆರ್ ಅಶೋಕ್ ತಿಳಿಸಿದರು.

ಬಿಎಂಎಸ್ ಶಾಲೆಯ ಕಾರ್ಯದರ್ಶಿ ಆ.ಮು ಲಕ್ಷ್ಮೀ ನಾರಾಯಾಣ ಮಾತಾನಾಡಿ ವಿದ್ಯಾರ್ಥಿಗಳ ಪ್ರಗತಿಗೆ ತಂದೆ ತಾಯಿಗಳು ಅಲ್ಲದೆ ಸಂಘ ಸಂಸ್ಥೆಗಳು ಪೆÇ್ರೀತ್ಸಾಹಿಸಿದಾಗ ಮಕ್ಕಳು ಸಮಾಜದ ಶಿಲ್ಪಿಗಳಾಗಲು ಸಾಧ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ ಅಧ್ಯಕ್ಷ ಬಿ. ಶಿವಕುಮಾರ್ ಮಾತಾನಾಡಿ ವಿದ್ಯಾರ್ಥಿಗಳು ಯಾವುದೇ ಚಿಂತನೆಗಳನ್ನು ಮಾಡದೆ ಕೊರಗದೆ ಸೊರಗದೆ ಅಂಕಗಳನ್ನು ಪಡೆಯುವ ಗುರಿಯ ಜೊತೆಗೆ ಉತ್ತಮ ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದರು.

ಪ್ರಾಥಮಿಕ ಹಂತದಿಂದಲೇ ಓದುವ ಬರೆಯುವ ಮತ್ತು ಮೂಲ ಕ್ರಿಯೆಗಳ ಕಲಿಯುವಿಕೆ ವಿದ್ಯಾರ್ಥಿಗಳ ಗುರಿಯಾಗಬೇಕು. ಸತತ ಪರಿಶ್ರಮ ಗೆಲುವನ್ನು ತಂದುಕೊಡುತ್ತದೆ ಎಂದು ಭಾವಿಸಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕೆಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಎನ್. ಗೋಪಾಲಕೃಷ್ಣ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುರುಳಿ ಮೋಹನ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಅಧೀಕ್ಷಕ ಎಂ. ಮಂಜುನಾಥ, ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ವೆಂಕಟೇಶಪ್ಪ, ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್, ಕವಿ ಡಾ. ಶರಣಪ್ಪ ಗಬ್ಬೂರ್, ಬಿ.ಎಂ.ಎಸ್ ಶಾಲೆಯ ಪ್ರಾಂಶುಪಾಲೆ ರತ್ನಕುಮಾರಿ, ಮುಖ್ಯ ಶಿಕ್ಷಕ ಶ್ರೀನಿವಾಸ, ವರದರಾಜ ಉಪಸ್ಥಿತರಿದ್ದರು.

ಚಿತ್ರ ; ಕೋಲಾರದಲ್ಲಿ ಬಿ.ಎಂ.ಎಸ್. ಶಾಲೆಯಲ್ಲಿ ಓಜೊನ್ ದಿನಾಚರಣೆಯಲ್ಲಿ ಮರು ಮೌಲ್ಯಮಾಪದನ ನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಸಾಯಿ ಮೇಘನಾ ರವರನ್ನು ಸನ್ಮಾನಿಸಲಾಯಿತು.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top