Dailyhunt Logo
  • Light mode
    Follow system
    Dark mode
    • Play Story
    • App Story
ಮೇ 30ರಂದು ಲಖನೌನಲ್ಲಿ ನೌಕಾಪಡೆ ಸಂಗ್ರಹಾಲಯಕ್ಕೆ ಚಾಲನೆ

ಮೇ 30ರಂದು ಲಖನೌನಲ್ಲಿ ನೌಕಾಪಡೆ ಸಂಗ್ರಹಾಲಯಕ್ಕೆ ಚಾಲನೆ

ಲಖನೌ, 28 ಮೇ (ಹಿ.ಸ.) :

ಯಂಕರ್ : ರಕ್ಷಣಾ ಸಚಿವ ಹಾಗೂ ಲಖ್ನೌ ಸಂಸದ ರಾಜನಾಥ್ ಸಿಂಗ್ ಅವರು ಮೇ 30ರಂದು ಲಖ್ನೌನ ಸಿಜಿಸಿಟಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ನೌಕಾಪಡೆ ಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ವೇದಪತಿ ಮಿಶ್ರ ಮಾಹಿತಿ ನೀಡಿದ್ದು, ಭಾರತೀಯ ನೌಕಾಪಡೆ ಮತ್ತು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಸಂಯುಕ್ತವಾಗಿ ಈ ನೌಕಾಪಡೆ ಸಂಗ್ರಹಾಲಯವನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.

ಸಂಗ್ರಹಾಲಯದಲ್ಲಿ ದೇಶದ ಸಮುದ್ರ ಭದ್ರತೆಯನ್ನು ಕಾಪಾಡುವ ಭಾರತೀಯ ನೌಕಾಪಡೆಯ ಶೌರ್ಯ, ಸಾಮರ್ಥ್ಯ, ಪರಾಕ್ರಮ ಹಾಗೂ ತಾಂತ್ರಿಕ ಪರಿಣತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗಿದೆ. ಇಲ್ಲಿ ಭೇಟಿ ನೀಡುವ ಸಾರ್ವಜನಿಕರಿಗೆ ಹಲವು ನೌಕಾಪಡೆ ಉಪಕರಣಗಳು ಮತ್ತು ತಾಂತ್ರಿಕ ಸಾಧನಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಇದರ ಜೊತೆಗೆ 'ಶೌರ್ಯ ವಾಟಿಕಾ ಓಪನ್ ಏರ್ ಮ್ಯೂಸಿಯಂ'ನಲ್ಲಿ ಟಿಯು-142 ಯುದ್ಧ ವಿಮಾನ ಹಾಗೂ ಎಸ್ಕೆ-42ಬಿ ಹೆಲಿಕಾಪ್ಟರ್ಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು. ಈ ಮೂಲಕ ಭಾರತೀಯ ನೌಕಾಪಡೆಯ ಇತಿಹಾಸ ಮತ್ತು ಕಾರ್ಯಾಚರಣೆಗಳ ಕುರಿತು ಜನರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada