Thursday, 29 Oct, 6.04 pm Hindusthan Samachar

ಸುದ್ದಿ
ಮೊಲೇವ್ ಚಂಡಮಾರುತ - ವಿಯೆಟ್ನಾಂನಲ್ಲಿ 19 ಸಾವು, 64 ಮಂದಿ ನಾಪತ್ತೆ

ಹಾನೋಯ್, ಅ.29 (ಹಿ.ಸ) : ಮೊಲೇವ್ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದಾಗಿ ಮಧ್ಯ ವಿಯೆಟ್ನಾಂನಲ್ಲಿ ಈವರೆಗೆ 19 ಮಂದಿ ಮೃತಪಟ್ಟಿದ್ದು, 64 ಮಂದಿ ಕಾಣೆಯಾಗಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಕೇಂದ್ರ ಖ್ವಾಂಗ್ ನಾಮ್ ಪ್ರಾಂತ್ಯದ ಟ್ರಾ ವ್ಯಾನ್ ಗ್ರಾಮದಲ್ಲಿ ಇಂದು ಬೆಳಗ್ಗೆ ಭೂಕುಸಿತದಿಂದ ಮನೆಗಳ ಮೇಲೆ ಬಿದ್ದಿದ್ದು, 8 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಮೊಲೇವ್ ಚೆಂಡಮಾರುತದಿಂದ ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದ್ದು, ಸಂತ್ರಸ್ತರನ್ನು ರಕ್ಷಿಸಿ ಸ್ಥಳಾಂತರ ಮಾಡಲಾಗಿದೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎರಡು ಮೀನುಗಾರಿಕಾ ಬೋಟ್​​​ನಲ್ಲಿದ್ದ 26 ಮಂದಿ ನಿನ್ನೆ ಕಾಣೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಈಗ ಸದ್ಯಕ್ಕೆ ಚಂಡಮಾರುತ 150 ಕಿಲೋಮೀಟರ್​ ವೇಗದಲ್ಲಿ ಬೀಸುತ್ತಿದ್ದು, ಹಾನಿ ಹೆಚ್ಚಾಗುವಂತೆ ಮಾಡುತ್ತಿದೆ. ಸುಮಾರು 20 ವರ್ಷಗಳಲ್ಲಿ ಇದು ಭೀಕರ ಚಂಡಮಾರುತವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದು, ಚಂಡಮಾರುತದ ಭೀಕರತೆಯಿಂದಾಗಿ ಸಂಭವಿಸಿದ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.


ಹಿಂದುಸ್ತಾನ ಸಮಾಚಾರ/ಎಂ.ಎಸ್ /ಯ.ಮ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top