Dailyhunt Logo
  • Light mode
    Follow system
    Dark mode
    • Play Story
    • App Story
ನಾರಾಯಣಪೇಟೆಯಲ್ಲಿ ಬಿಜೆಪಿ ಜಿಲ್ಲಾ ತರಬೇತಿ ಶಿಬಿರ

ನಾರಾಯಣಪೇಟೆಯಲ್ಲಿ ಬಿಜೆಪಿ ಜಿಲ್ಲಾ ತರಬೇತಿ ಶಿಬಿರ

ಬೆಂಗಳೂರು, 28 ಮೇ (ಹಿ.ಸ.) :

ಯಂಕರ್ : ನಾರಾಯಣಪೇಟೆಯಲ್ಲಿ ನಡೆದ ಬಿಜೆಪಿ ಬಳ್ಳಾರಿ ಜಿಲ್ಲಾ ತರಬೇತಿ ಶಿಬಿರದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಕಾರ್ಯಕರ್ತರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಯಿತು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, "ಕಾರ್ಯಕರ್ತರ ಪಕ್ಷನಿಷ್ಠೆ, ಶಿಸ್ತು ಮತ್ತು ಜನಸೇವೆಯ ಬದ್ಧತೆಯೇ ಬಿಜೆಪಿಯ ನಿಜವಾದ ಶಕ್ತಿ.

ಬೂತ್ ಮಟ್ಟದಿಂದಲೇ ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡಿ, ಒಗ್ಗಟ್ಟಿನಿಂದ ಪಕ್ಷದ ಗುರಿ ಸಾಧಿಸುವ ಸಂಕಲ್ಪ ನಮ್ಮದಾಗಿದೆ" ಎಂದು ಹೇಳಿದರು.

ಮುಂದಿನ ರಾಜಕೀಯ ಕಾರ್ಯತಂತ್ರಗಳು, ಸಂಘಟನೆ ವಿಸ್ತರಣೆ, ಜನಸಂಪರ್ಕ ಬಲವರ್ಧನೆ ಹಾಗೂ ಬೂತ್ ಮಟ್ಟದ ಚಟುವಟಿಕೆಗಳ ಕುರಿತು ಶಿಬಿರದಲ್ಲಿ ಚರ್ಚೆ ನಡೆಯಿತು. ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಸದೃಢಗೊಳಿಸುವ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಯಿತು.

ಶಿಬಿರದಲ್ಲಿ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ಕುಮಾರ್ ಮೊಕಾ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ರವಿ ಕುಮಾರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಪ್ರಮುಖ ನಾಯಕಿ ಲಕ್ಷ್ಮೀ ಅರುಣ ಜನಾರ್ದನ ರೆಡ್ಡಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada