Dailyhunt Logo
  • Light mode
    Follow system
    Dark mode
    • Play Story
    • App Story
ನಟ ಕೋಮಲ್ ಕುಮಾರ್ಗೆ ಹುಟ್ಟುಹಬ್ಬದ ಸಂಭ್ರಮ; 'ತೆನಾಲಿ' ಚಿತ್ರತಂಡದಿಂದ ಸರಳ ಆಚರಣೆ

ನಟ ಕೋಮಲ್ ಕುಮಾರ್ಗೆ ಹುಟ್ಟುಹಬ್ಬದ ಸಂಭ್ರಮ; 'ತೆನಾಲಿ' ಚಿತ್ರತಂಡದಿಂದ ಸರಳ ಆಚರಣೆ

ಬೆಂಗಳೂರು, 04 ಜುಲೈ (ಹಿ.ಸ.):

ಯಂಕರ್:ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಕೋಮಲ್‌ ಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹಲವು ವರ್ಷಗಳಿಂದ ತಮ್ಮ ವಿಶಿಷ್ಟ ಹಾಸ್ಯ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರುವ ಕೋಮಲ್‌, ಈ ಬಾರಿ ಯಾವುದೇ ಅದ್ಧೂರಿತನವಿಲ್ಲದೆ ಕುಟುಂಬ ಹಾಗೂ ತಮ್ಮ ಹೊಸ ಚಿತ್ರದ ತಂಡದೊಂದಿಗೆ ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡರು.

ಪ್ರಸ್ತುತ ಅಭಿನಯಿಸುತ್ತಿರುವ 'ತೆನಾಲಿ' ಚಿತ್ರದ ತಂಡ ಕೋಮಲ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕೇಕ್‌ ಕತ್ತರಿಸುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿತು. ಚಿತ್ರದ ನಿರ್ದೇಶಕ ಸಿದ್ವಿನ್‌ ಧ್ರುವ್‌ ಹೂಗುಚ್ಚ ನೀಡಿ ಶುಭಾಶಯ ತಿಳಿಸಿದರೆ, ಚಿತ್ರದ ಚಿತ್ರೀಕರಣದ ಪ್ರಗತಿಯ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

'ತೆನಾಲಿ' ಚಿತ್ರದಲ್ಲಿ ಕಾಜಲ್‌ ಕುಂದರ್‌ ಮತ್ತು ಅಕ್ಷಿತಾ ಬೋಪಯ್ಯ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಸಿದ್ವಿನ್‌ ಧ್ರುವ್‌ ನಿರ್ದೇಶನವಿದ್ದು, ಸಂತೋಷ್‌ ಮಾಯಪ್ಪ, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ ಹಾಗೂ ರೇಣುಕಾ ಪ್ರಸಾದ್‌ ನಿರ್ಮಾಪಕರಾಗಿದ್ದಾರೆ. ರಿತ್ವಿಕ್‌ ಮುರಳಿಧರನ್‌ ಸಂಗೀತ ಸಂಯೋಜನೆ ಮಾಡುತ್ತಿದ್ದು, ಉದಯ್‌ ಲೀಲಾ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada