Wednesday, 27 Jan, 7.58 pm Hindusthan Samachar

ಸುದ್ದಿ
ನಿಧಿ ಸಂಗ್ರಹ ಅಭಿಯಾನ - ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕರಪತ್ರ ಹಂಚಿಕೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಂಗ್ರಹ ಅಭಿಯಾನ - ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕರಪತ್ರ ಹಂಚಿಕೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಂಗ್ರಹ ಅಭಿಯಾನ 15-01-2021 ರಿಂದ 05-02-2021 ವರೆಗೆ ನಡೆಯುತ್ತಿದ್ದು ಇಂದು ದಿನಾಂಕ 27-01-2021 ರಂದು ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಪ್ರಮುಖರ ಮನೆಗೆ ಭೇಟಿ ನೀಡಿ "ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ" ಕರಪತ್ರವನ್ನು ಹಂಚಲಾಯಿತು.


ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನಗರ ಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಕರಂಬಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ನಗರ ಸಂಘಚಾಲಕ್ ರಾಮಚಂದ್ರ ಸನಿಲ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಮುಖ್ ಚಂದ್ರಶೇಖರ್ ನಾಯ್ಕ್, ಮಾತೃ ಮಂಡಳಿ ಪ್ರಮುಖ್ ಮಂಜುಳಾ ವಿ ಪ್ರಸಾದ್, ಪಕ್ಷದ ಕಾರ್ಯಕರ್ತರಾದ ವಿಷ್ಣು ಪ್ರಸಾದ್ ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top