Wednesday, 16 Sep, 9.18 pm Hindusthan Samachar

ಸುದ್ದಿ
ರಾಜ್ಯದಲ್ಲಿ ಇಂದು 9,725ಜನರಿಗೆ ಸೊಂಕು, 6,583ಮಂದಿ ಗುಣಮುಖ

ಬೆಂಗಳೂರು,ಸೆಪ್ಟೆಂಬರ್ 16: ರಾಜ್ಯದಲ್ಲಿ ಕರೋನಾ ಅಬ್ಬರ ಮುಂದುವರೆದಿದ್ದು ಇಂದು 9725 ಮಂದಿ ಜನರಿಗೆ ಸೊಂಕು ದೃಡಪಟ್ಟಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 70ಮಂದಿ ಬಲಿಯಾಗಿದ್ದಾರೆ ಒಟ್ಟಾರೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ7536ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 6583 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಪ್ರಕರಣ 484990ಕ್ಕೆ ಏರಿಕೆಯಾಗಿದ್ದು ಇವರಲ್ಲಿ ಇದುವರೆಗೆ 375809 ಸೋಂಕಿತರು ಗುಣಮುಖರಾಗಿದ್ದಾರೆ.


ರಾಜ್ಯದಲ್ಲಿ ಒಟ್ಟಾರೆ 101626 ಸಕ್ರಿಯ ಪ್ರಕರಣಗಳಿವೆ ಐಸಿಯುನಲ್ಲಿ 818ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನ ಅಬ್ಬರ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 3571 ಜನರಿಗೆ ಸೋಂಕು ತಗುಲಿದೆ ಹಾಗೆಯೇ ಕಳೆದ 24 ಗಂಟೆಗಳಲ್ಲಿ 27 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ಇಂದು 3773 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಒಟ್ಟಾರೆ ಇದುವರೆಗೂ 138289 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರಿನಲ್ಲಿ ಒಟ್ಟು ಸೋಂಕು ಪ್ರಕರಣಗಳು 180283ಆಗಿದ್ದು ಈ ಪೈಕಿ 39472 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಇದುವರೆಗೂ 2521ಸೋಂಕಿತರು ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ವಿವರ:

ಬಾಗಲಕೋಟೆ 158ಬಳ್ಳಾರಿ 381 ಬೆಳಗಾವಿ 258ಬೆಂಗಳೂರು ಗ್ರಾಮಾಂತರ 168ಬೀದರ್ 52 ಚಾಮರಾಜನಗರ 65 ಚಿಕ್ಕಮಗಳೂರು 171 ಚಿಕ್ಕಬಳ್ಳಾಪುರ 149ಚಿತ್ರದುರ್ಗ 227ದಕ್ಷಿಣ ಕನ್ನಡ 466 ದಾವಣಗೆರೆ 213ಧಾರವಾಡ 246 ಗದಗ 108 ಹಾಸನ 308ಹಾವೇರಿ 81 ಕಲಬುರಗಿ221 ಕೊಡಗು 41 ಕೋಲಾರ 101 ಕೊಪ್ಪಳ 152 ಮಂಡ್ಯ 182 ಮೈಸೂರು 748 ರಾಯಚೂರು 193 ರಾಮನಗರ 62 ಶಿವಮೊಗ್ಗ 293ತುಮಕೂರು 401 ಉಡುಪಿ 191 ಉತ್ತರ ಕನ್ನಡ 294 ವಿಜಯಪುರ 115ಯಾದಗಿರಿ 109

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top