ರಾಯಚೂರು, 07 ಜುಲೈ (ಹಿ.ಸ.)
ಆಯಂಕರ್ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಜುಲೈ 06ರ ಸೋಮವಾರ ಸಂಜೆ ವೇಳೆಗೆ ಜಿಲ್ಲಾದ್ಯಂತ ಇವರೆಗೆ 14,34,723 ಲಕ್ಷ ಮತದಾರರ ಗಣತಿ ನಮೂನೆಯನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17,14,559 ಮತದಾರರ ಪೈಕಿ ಈವರೆಗೆ ಶೇ.83.68ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 18.08 ಲಕ್ಷ ಮತದಾರರ ನಮೂನೆಗಳನ್ನು ಡಿಜಿಟಲೀಕರಿಸಲು ಸಾಧ್ಯವಾಗಿದೆ. 1,180 ಮತದಾರರು ಈವರೆಗೆ ಆನ್ಲೈನ್ ಮೂಲಕ ಗಣತಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ.
ಸ್ಥಳದಲ್ಲಿ ಇಲ್ಲದ, ಬೇರೆ ವಿಳಾಸಕ್ಕೆ ಸ್ಥಳಾಂತರವಾದ, ಮೃತಪಟ್ಟ ಮತ್ತು ಎರಡು ಕಡೆ ನೋಂದಣಿಯಾದ ಒಟ್ಟು 3,898 ಮತದಾರರ ವಿವರ ಲಭ್ಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

