Dailyhunt
ರಾಯಲ್ ಪೋರ್ಟ್ ಎರಡು ದಿನಗಳ ವರಾಹಿ ಜುವೆಲರ್ಸ್ ಪ್ರದರ್ಶನ ಮತ್ತು ಮಾರಾಟ

ರಾಯಲ್ ಪೋರ್ಟ್ ಎರಡು ದಿನಗಳ ವರಾಹಿ ಜುವೆಲರ್ಸ್ ಪ್ರದರ್ಶನ ಮತ್ತು ಮಾರಾಟ

ಬಳ್ಳಾರಿ, 04 ಏಪ್ರಿಲ್ (ಹಿ.ಸ.) :

ಯಂಕರ್ : ನಗರದ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹೈದರಾಬಾದ್ ಮೂಲದ ಕಂಪನಿ ವರಾಹಿ ಜೆವೆಲರ್ಸ್ ವತಿಯಿಂದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ ಎಂದು ಕಂಪನಿಯ ಎಂಡಿ ಸಂದೀಪ್ ಕರ್ಣಂ ತಿಳಿಸಿದ್ದಾರೆ.

ಇಂದು ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ಣಂ, ವಿವಿಧ ಬಗೆಯ ಸಿಲ್ವರ್ ಮತ್ತು ಗೋಲ್ಡನ್ ಆರ್ನಮೆಂಟ್ಸ್ ಗಳ ಖರೀದಿಗಾಗಿ ಬಳ್ಳಾರಿ ಜನರು ಹೈದರಾಬಾದ್ ನಗರಕ್ಕೆ ಹೋಗುತ್ತಿದ್ದರು, ಇದನ್ನು ಮನಗಂಡ ವರಾಹಿ ಗೋಲ್ಡ್ ಕಂಪನಿ ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ನಗರದ ಜನತೆಯ ಅನುಕೂಲಕ್ಕಾಗಿ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ, ನಾವು ಕಳೆದ ಐದಾರು ವರ್ಷಗಳಿಂದ ಈ ಎಕ್ಸಿಬಿಷನ್ ಕಾರ್ಯಕ್ರಮವನ್ನು ಏರ್ಪಡಿಸುತ್ತೇವೆ ಬಳ್ಳಾರಿ ಜನತೆಯ ಉತ್ತಮ ಪ್ರತಿಕ್ರಿಯೆಯಿಂದಾಗಿ ನಾವು ಮತ್ತೆ ಇಂದು ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದೇವೆ, ಈ ಪ್ರದರ್ಶನ ಮತ್ತು ಮಾರಾಟದಲ್ಲಿ ವಿವಿಧ ಬಗೆಯ ವಿವಿಧ ಮಾದರಿಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿದ್ದು, ಮದುವೆ ಕಾರ್ಯಕ್ರಮಗಳ ಈ ಸುಗ್ಗಿಯಲ್ಲಿ ನಗರದ ಜನತೆ ನಮ್ಮ ಮಳಿಗೆಗೆ ಒಮ್ಮೆ ಭೇಟಿ ನೀಡಿ ತಮಗೆ ಇಷ್ಟವಾದಂತಹ ಆಭರಣಗಳನ್ನು ಖರೀದಿಸಬಹುದು ಎಂದು ತಿಳಿಸಿದರು.

ಸದ್ಯ ಈಗ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಕಡಿಮೆಯಾಗಿದ್ದು ಈಗ ಸಾರ್ವಜನಿಕರು ತಮಗೆ ಬೇಕಾದಂತಹ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು ನಗರದ ಜನತೆ ಈ ಸದಾಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸಿದರು. ಜೊತೆಗೆ ಅತಿ ಶೀಘ್ರದಲ್ಲಿ ಬಳ್ಳಾರಿ ನಗರದಲ್ಲಿ ನಮ್ಮ ಕಂಪನಿಯ ಶೋರೂಮ್ ಆರಂಭಿಸಲು ಕಂಪನಿ ಉತ್ಸುವಾಗಿದೆ ಎಂದು ತಿಳಿಸಿದರು.

ಈ ಪ್ರದರ್ಶನ ಮತ್ತು ಮಾರಾಟವನ್ನು ನಗರದ ಮುಖಂಡರಾದ ಉಜ್ವಲಾ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada