Dailyhunt Logo
  • Light mode
    Follow system
    Dark mode
    • Play Story
    • App Story

`ಸರ್ಕಾರಿ ನ್ಯಾಯಬೆಲೆ ಅಂಗಡಿ' ಜೂನ್ 1 ರಂದು ಬಿಡುಗಡೆ

ಬಳ್ಳಾರಿ, 16 ಮೇ (ಹಿ.ಸ.) :

ಯಂಕರ್ : ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗಳು, ಕರ್ತವ್ಯಗಳು, ಎದುರಾಗುವ ನಿತ್ಯದ ಸಮಸ್ಯೆಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರೀಕರಿಸಿರುವ `ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಲನಚಿತ್ರದ ಪೆÇೀಸ್ಟರ್ ಅನ್ನು ಬಳ್ಳಾರಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಟಿ. ಕೃಷ್ಣಪ್ಪ ಅವರು `ಸರ್ಕಾರಿ ನ್ಯಾಯಬೆಲೆ ಅಂಗಡಿ' ಪೋಸ್ಟರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದರು.

ಚಿತ್ರ ನಿರ್ಮಾಪಕರಾದ ತೇಜುಮೂರ್ತಿ, ಭಾಮ ಹರೀಶ್, ಪದ್ಮಾವತಿ, ಚಂದ್ರು ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಚಿತ್ರೀಕರಣಗೊಂಡಿರುವ `ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಲನಚಿತ್ರವು ಖ್ಯಾತ ಕಲಾವಿಧಾರದ ಕುಮಾರ ಬಂಗಾರಪ್ಪ, ರಾಗಿಣಿ, ದೊಡ್ಡಣ್ಣ ಅವರನ್ನೂ ಒಳಗೊಂಡಿದ್ದು ಜೂನ್ 1 ರಂದು ಬಿಡುಗಡೆ ಆಗಲಿದೆ ಎಂದರು.

ಜೂ.1 ರಂದು ಶಿವಮೊಗ್ಗ, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರೊಂದಿಗೆ ಏಕಕಾಲಕ್ಕೆ ಚಿತ್ರ ಬಿಡುಗಡೆಯನ್ನು ಉದ್ಘಾಟಿಸಲಾಗುತ್ತದೆ.

ಚಲನಚಿತ್ರದ ನಿರ್ಮಾಪಕರಾದ ತೇಜುಮೂರ್ತಿ, ಭಾಮಾ ಹರೀಶ್, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರು, ನ್ಯಾಯಬೆಲೆ ಅಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೀನಳ್ಳಿ ತಾಯಣ್ಣ, ಚಿತ್ರತಂಡದ ಪದ್ಮಾವತಿ, ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ್ ಹೆಗಡೆ, ರಾಜ್ಯ ಸಮಿತಿ ಸದಸ್ಯ ಕೆ.ಎ. ವೇಮಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಹುಂಡೇಕರ್ ಪ್ರಕಾಶ್, ಹುಸೇನಪ್ಪ, ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಕೊಡ್ಲಿ, ಜಗದೀಶ್ಸ್ವಾಮಿ, ವೆಂಕಟೇಶ್, ಪಂಪಾಪತಿ, ಜಗನ್ನಾಥ ಗೌಡ್ರು, ಪಾಲಾಕ್ಷಿ ರೆಡ್ಡಿ, ಕೌಲ್ ಬಜಾರ್ ಮಾರುತಿ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವರಗಳಿಗಾಗಿ : ಮೀನಳ್ಳಿ ತಾಯಣ್ಣ, ಅಧ್ಯಕ್ಷರು, ನ್ಯಾಯಬೆಲೆ ಅಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷರು, ಬಳ್ಳಾರಿ - ಮೊಬೈಲ್ : 94480 65143 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada