Dailyhunt Logo
  • Light mode
    Follow system
    Dark mode
    • Play Story
    • App Story
ಶರಣರ ಶಿವಯೋಗ ಗ್ರಂಥ

ಶರಣರ ಶಿವಯೋಗ ಗ್ರಂಥ

ಚಿಕ್ಕೋಡಿ, 28 ಮೇ (ಹಿ.ಸ.) :

ಯಂಕರ್ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ವೈದ್ಯರಾಗಿರುವ ಡಾ. ದಯಾನಂದ ಈ ನೂಲಿ ಅವರು ಶರಣರ ಶಿವಯೋಗ ಎನ್ನುವ 1355 ಪುಟಗಳ ಬೃಹತ್ ಗ್ರಂಥವನ್ನು ರಚಿಸಿದ್ದಾರೆ.

ಬಸವಾದಿ ಶರಣರ ಲಿಂಗಾಂಗ ಸಾಮರಸ್ಯದ ವಚನಗಳನ್ನು ಆಧಾರವಾಗಿಟ್ಟುಕೊಂಡು ವಚನ ಸಾಹಿತ್ಯ ಆಳವಾದ ಅಧ್ಯಯನ ಅಧ್ಯಯನ ಮತ್ತು ಲಿಂಗಾಂಗ ಯೋಗದ ಸ್ವಾನುಭವದ ಫಲಶೃತಿಯಲ್ಲಿ ಈ ಕೃತಿ ರಚನೆಗೊಂಡಿರುವುದು ಸ್ವಾಗತಾರ್ಹವಾಗಿದೆ.

ಅಂಗವನ್ನು ಲಿಂಗವಾಗಿಸುವ, ಮಾನವನನ್ನು ಮಹಾದೇವನನ್ನಾಗಿಸುವ ಲಿಂಗಾಯತ ಧರ್ಮದ ಘನ ಉದ್ದೇಶವನ್ನು ಹಾಗೂ ಬಿಡಿಬಿಡಿಯಾಗಿದ್ದ ಶರಣರ ಶಿವಯೋಗ ಪರಿಕಲ್ಪನೆಯ ವಚನಗಳನ್ನು ಕ್ರೋಢೀಕರಿಸಿ ಕೊಟ್ಟಿರುವುದಕ್ಕೆ ನೂಲಿಯವರಿಗೆ ಹೃತ್ಪೂರ್ವಕ ಶರಣು ಶರಣಾರ್ಥಿಗಳು.

ಲಿಂಗಾಯತ ಮಠಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಡಾ. ನೂಲಿಯವರು ವೈದ್ಯಕೀಯ ಸರ್ಜನ್ ಆಗಿಯೂ ಬಸವಾದಿ ಶರಣರ ತತ್ವಾಭಿಮಾನಿಯಾಗಿ ಲಿಂಗಾಯತ ಧರ್ಮಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಭಾವಿಸುತ್ತೇನೆ. ಅವರ ಶರಣ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲೆಂದು ಆಶಿಸುತ್ತೇನೆ.

ಶರಣರ ಶಿವಯೋಗದ ಸಮಗ್ರ ಪರಿಚಯ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಕೃತಿಗಾಗಿ ಡಾ. ದಯಾನಂದ ನೂಲಿಯವರನ್ನು ದೂರವಾಣಿ ಸಂಖ್ಯೆ 9448133510 ಮೂಲಕ ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada