Dailyhunt Logo
  • Light mode
    Follow system
    Dark mode
    • Play Story
    • App Story

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸ್ಥಳಾಂತರ

ರಾಯಚೂರು , 09 ಜುಲೈ (ಹಿ.ಸ.):

ಯಂಕರ್ : ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ರಾಯಚೂರಿನ ಬುಡ್ಡಿಬಾಬಾ ದರ್ಗಾ ಹತ್ತಿರದ ಆರ್.ಆರ್.ಕಾಲೋನಿಗೆ ಸ್ಥಳಾಂತರವಾಗಿದ್ದು, ಸಾರ್ವಜನಿಕರು ಸಹಕಾರಿಸುವಂತೆ ತಿಳಿಸಿದ್ದಾರೆ.

ಈ ಹಿಂದೆ ಡಾ.ಕಿಶನ್ ರಾವ್ ಕಟ್ಟಡ ಆಶಾಪೂರು ಕ್ರಾಸ್ ಸ್ಟೇಷನ್ ರೋಡ್ ರಾಯಚೂರಿನಲ್ಲಿ ಕಚೇರಿಯು ಕಾರ್ಯ ನಿರ್ವಹಣೆ ಮಾಡಲಾಗುತ್ತಿತ್ತು.

ಪ್ರಸ್ತುತ ರಾಯಚೂರಿನ ಬುಡ್ಡಿಬಾಬಾ ದರ್ಗಾ ಹತ್ತಿರದ ಆರ್.ಆರ್.ಕಾಲೋನಿಗೆ ಸ್ಥಳಾಂತರವಾಗಿದ್ದು, ಸಾರ್ವಜನಿಕರು ಪತ್ರ ವ್ಯವಹಾರ ಹಾಗೂ ಸರ್ಕಾರದ ವಿವಿಧ ಸೌಲಭ್ಯ, ಯೋಜನೆಗಳ ಕುರಿತು ಈ ವಿಳಾಸಕ್ಕೆ ಸಂಪರ್ಕ ಮಾಡಬಹುದಾಗಿದೆ ಎಂದು ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada