Thursday, 30 Jul, 9.52 pm Hindusthan Samachar

ಸುದ್ದಿ
ಸುಖೋಯ್ ಯುದ್ಧ ವಿಮಾನ ಖರೀದಿಸಿದ್ದು ಹೆಚ್ಡಿದೇವೇಗೌಡರು

ಇಂದು ಭಾರತದ ವಾಯು ವಿಭಾಗಕ್ಕೆ 5 ರಫೆಲ್ ಯುದ್ಧ ವಿಮಾನ ಸೇರಿದೆ. ಖುಷಿ ಹಾಗೂ ಹೆಮ್ಮೆಯ ವಿಚಾರ. ಆದರೆ ಸ್ವಲ್ಪ ಆಲೋಚಿಸಿ ತಿಳಿಯಬೇಕಾದದ್ದು ಇನ್ನೂ ಇದೆ:

■ ಆ ಐದು ಯುದ್ಧವಿಮಾನಗಳ ಬೆಂಗಾವಲಿಗೆ ಹೋಗಿದ್ದು ಎರಡು ಸುಖೋಯ್-30 ಯುದ್ಧ ವಿಮಾನಗಳು. ಈ ಸಂಖ್ಯೆಯೇ ಸಾಕು ಸುಖೋಯ್ ಶಕ್ತಿ ಸಾಮರ್ಥ್ಯ ಅಳೆಯಲು.

ಒಬ್ಬ ಪ್ರಧಾನಿಗೆ 10ಜನ ಅಂಗರಕ್ಷಕರು ಇರುವ ಈ ಕಾಲದಲ್ಲಿ ಐದು ಆಧುನಿಕ ವಿಮಾನಗಳಿಗೆ ಎರಡು ವಿಮಾನಗಳು ಬೆಂಗಾವಲು ಸಾಕು ಎಂದರೆ ರಫೆಲ್ ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್ ಗಿದೆ ಎಂದರ್ಥ.

■ಇದರ ಮೂಲ ಹುಡುಕುತ್ತ ಹೋದಾಗ ಗೊತ್ತಾದ ಸತ್ಯವೊಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಇಡೀ ಭಾರತವೇ ಹೆಮ್ಮೆ ಪಡುವ ವಿಷ್ಯವೊಂದು ನೆನಪಿನ ಬುತ್ತಿಯಿಂದ ಜೊತೆಗೆ ಸಾಕ್ಷಿಗಳ ಸಮೇತ.


ಅದುವೇ ಸುಖೋಯ್ ಎಂಬ ಸಶಕ್ತ ಹಾಗೂ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತ ವಾಯುಸೇನೆಗೆ ಖರೀದಿಸಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಪ್ರಧಾನಿ ಹೆಚ್ಡಿದೇವೇಗೌಡರು.

ಅದಕ್ಕೆ ಸಾಕ್ಷಿ ಕೆಳಗಿನ ಫೋಟೋಗಳು. ದಾಖಲೆ ಕಳೆದುಕೊಳ್ಳುವ ಅಸಮರ್ಥ ರಾಜಕಾರಣಿಯಲ್ಲ ನಮ್ಮ ದೇವೇಗೌಡರು.

ದೇವೇಗೌಡರ ಆಡಳಿತದ ಅವಧಿ, ಸುಖೋಯ್ ಒಪ್ಪಂದದ ದಿನಾಂಕ, ಹಾಗೂ ಒಪ್ಪಂದದ ವೇಳೆಯ ಛಾಯಾಚಿತ್ರಗಳು.

ಇದೆ ರಾಜ್ಯದಲ್ಲಿ ಹುಟ್ಟಿ ನಮ್ಮ ನಾಯಕರ ಸಾಧನೆಗಳು ಗೊತ್ತಿರದೆ ,ನಮ್ಮ ಶ್ರೇಷ್ಟತೆಯನ್ನು ಮರೆತು ಅವರನ್ನೇ ತೆಗಳಿ ಪರರಾಜ್ಯದ ಭಕ್ತರಾದರೆ ದೊಡ್ಡ ದೇಶಭಕ್ತನೆಂಬ ಪಟ್ಟಕ್ಕಾಗಿ ಸ್ವಂತಿಕೆಯನ್ನು ಮರೆತವರಿಗೆ ಇದು ಅರ್ಪಣೆಯಾಗಲಿ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Hindusthan Samachar Kannada
Top