ತೋರಣಗಲ್ಲು, 05 ಆಗಸ್ಟ್ (ಹಿ.ಸ.)
ಆಯಂಕರ್ : ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಗರತ್ನಮ್ಮ ಎನ್ನುವ 32 ವರ್ಷದ ಮಹಿಳೆಯು ಅಭಿರಾಮ್ ರೆಡ್ಡಿ ಎನ್ನುವ 8 ವರ್ಷದ ತನ್ನ ಮಗುವಿನೊಂದಿಗೆ ಜುಲೈ 30 ರಂದು ಕಾಣೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
*ನಾಗರತ್ನಮ್ಮ ಚಹರೆ ಗುರುತು:*
ಸುಮಾರು 5.2 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಮಹಿಳೆಯು ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ.
*ಅಭಿರಾಮ್ ರೆಡ್ಡಿ ಚಹರೆ ಗುರುತು:*
ಸುಮಾರು 3 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಕೋರ್ಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹರೆಯುಳ್ಳ ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ.08395-250100, ಮೊ.9480803062, ಸಂಡೂರು ಸಿಪಿಐ ಮೊ.9480803036, ತೋರಣಗಲ್ಲು ಡಿಎಸ್ಪಿ ಮೊ.9480803010, ಬಳ್ಳಾರಿ ಎಸ್ಪಿ ದೂ.08392-258300, ಅಥವಾ ಬಳ್ಳಾರಿ ಕಂಟ್ರೋಲ್ ರೂಮ್ ದೂ.08392-279100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

