Dailyhunt Logo
  • Light mode
    Follow system
    Dark mode
    • Play Story
    • App Story
ತುರುವಿಹಾಳ ಗ್ರಾಮದ ವ್ಯಕ್ತಿ ಕಾಣೆ

ತುರುವಿಹಾಳ ಗ್ರಾಮದ ವ್ಯಕ್ತಿ ಕಾಣೆ

ಕುಷ್ಟಗಿ, 25 ಮೇ (ಹಿ.ಸ.) :

ಯಂಕರ್ : ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ನಿವಾಸಿ ಬಸಪ್ಪ ತಂದೆ ಹುಲಿಗಪ್ಪ ಹರಿಜನ (61) ಕಾಣೆಯಾಗಿದ್ದಾರೆ ಎಂದು ತಾವರಗೇರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಏಪ್ರಿಲ್ 9 ರಂದು ತುರುವಿಹಾಳ ಗ್ರಾಮದ ಮರಿಯಮ್ಮದೇವಿ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸಾಗಿಲ್ಲ.

ಈ ಹಿನ್ನೆಲೆಯಲ್ಲಿ ಕಾಣೆಯಾದ ವ್ಯಕ್ತಿಯ ಪುತ್ರ ತಾವರಗೇರಾ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಾವರಗೇರಾ ಪೊಲೀಸ್ ಠಾಣೆಯ ಪೊಲೀಸ್ರು ಗುನ್ನೆ ಸಂಖ್ಯೆ 45/2026ರಡಿ ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ: ಬಸಪ್ಪ ಅವರು ಅವರು ಒಕ್ಕಲುತನ ವೃತ್ತಿ ಮಾಡುತ್ತಿದ್ದು, ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಕೋಲು ಮುಖ, ಉದ್ದನೆಯ ಮೂಗು ಹಾಗೂ ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಹೊಂದಿದ್ದು, ಕುತ್ತಿಗೆಯ ಎಡಭಾಗದಲ್ಲಿ ನರಳೆ ಗುರುತು ಇರುತ್ತದೆ ಮತ್ತು ಈ ವ್ಯಕ್ತಿಯು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದಾಗ ಬಿಳಿ ಧೋತರ ಹಾಗೂ ಬಿಳಿ ನಿಲುವಂಗಿ (ಶರ್ಟ್) ಧರಿಸಿದ್ದರು.

ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಎಸ್.ಪಿ ಮೊ.ಸಂ: 9480803701 ದೂ.ಸಂ: 08539-230111, ಗಂಗಾವತಿ ಡಿ.ವೈ.ಎಸ್.ಪಿ ಮೊ.ಸಂ: 9480803721 ದೂ.ಸಂ: 08536-230853, ಕುಷ್ಟಗಿ ಸಿ.ಪಿ.ಐ ಮೊ.ಸಂ: 9480803732 ದೂ.ಸಂ: 08536-267033, ತಾವರಗೇರಾ ಪಿ.ಎಸ್.ಐ ಮೊ.ಸಂ: 9480803758 ದೂ.ಸಂ: 08536-275322 ಗೆ ಸಂಪರ್ಕಿಸುವಂತೆ ತಾವರಗೇರಾ ಪೊಲೀಸ್ ಠಾಣೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada