Dailyhunt
ವರ್ಣಭೂಮಿ ಫೌಂಡೇಷನ್ನಿಂದ ಕನ್ನಡಿಗರ ವಿಜಯ ದಿನ ಆಚರಣೆ

ವರ್ಣಭೂಮಿ ಫೌಂಡೇಷನ್ನಿಂದ ಕನ್ನಡಿಗರ ವಿಜಯ ದಿನ ಆಚರಣೆ

ಕೋಲಾರ, 0೪ ಏಪ್ರಿಲ್ (ಹಿ. ಸ.) :

ಯಂಕರ್ : ಏಪ್ರಿಲ್ ೪ ಅನ್ನು ಕನ್ನಡಿಗರ ವಿಜಯ ದಿನ (ವಿಜಯೋತ್ಸವ) ಎಂದು ಆಚರಿಸಲಾಗುತ್ತದೆ. ಕ್ರಿ.ಶ. ೬೧೮ರ ಸುಮಾರಿಗೆ (ಕೆಲವು ದಾಖಲೆಗಳ ಪ್ರಕಾರ ೭ನೇ ಶತಮಾನ) ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯು ನರ್ಮದಾ ನದಿ ತೀರದಲ್ಲಿ ಉತ್ತರ ಭಾರತದ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಉಳಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ.

ಈ ದಿನವನ್ನು ನಾಡಿನ ಪ್ರತಿಯೊಬ್ಬರು ಸಂಭ್ರಮದಿ೦ದ ಆಚರಿಸಬೇಕು ಎಂದು ಸ್ವರ್ಣಭೂಮಿ ಫೌಂಡೇ ಷನ್ ಅಧ್ಯಕ್ಷರಾದ ಬಿ.ಶಿವಕುಮಾರ್ ತಿಳಿಸಿದರು.

ಕೋಲಾರ ನಗರದ ಸರ್ವಜ್ಞ ಪಾರ್ಕ್ನಲ್ಲಿ ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡಿಗರ ವಿಜಯ ದಿನದ ಆಚರಣೆಯಲ್ಲಿ ಮಾತನಾಡಿದರು.

ಇಮ್ಮಡಿ ಪುಲಕೇಶಿಯು ಹರ್ಷವರ್ಧನನ ದಕ್ಷಿಣ ದಿಗ್ವಿಜಯದ ಆಸೆಯನ್ನು ನುಚ್ಚುನೂರು ಮಾಡಿದನು. ಈ ಜಯದ ನಂತರ ಪುಲಕೇಶಿಗೆ 'ದಕ್ಷಿಣ ಪತೇಶ್ವರ' ಎಂಬ ಬಿರುದು ಬಂದಿತು. ಇಂತಹ ಐತಿಹಾಸಿಕ ದಿನದ ಕಾರ್ಯಕ್ರಮವನ್ನು ಸ್ವರ್ಣಭೂಮಿ ಫೌಂಡೇಷನ್ ಹಮ್ಮಿಕೊಂಡು ಆಚರಿಸುತ್ತಿರುವುದಕ್ಕೆ ಇಡೀ ತಂಡಕ್ಕೆ ಅಭಿನಂದನೆ ಗಳು ಎಂದು ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷರದ ಜಿ. ಶ್ರೀನಿವಾಸ್ ತಿಳಿಸಿದರು.

ಈ ದಿನ ಕನ್ನಡಿಗರು ಪುಲಕೇಶಿಯ ಶೌರ್ಯವನ್ನು ಸ್ಮರಿಸಿ, ವಿಜಯೋತ್ಸವ ಆಚರಿಸುತ್ತಾರೆ. ಇದು ಕನ್ನಡ ನಾಡಿನ ಶಕ್ತಿ ಮತ್ತು ಅಸ್ಮಿತೆಯ ಪ್ರತೀಕವಾಗಿ ಆಚರಿಸಲ್ಪಡುವ ಪ್ರಮುಖ ದಿನವಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜೋಲ್ಲಾಧ್ಯಕ್ಷರದ ಪಿ. ನಾರಾಯಣಪ್ಪ ತಿಳಿಸಿದರು.

ರಂಗ ಇಂಚರ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಮಾತನಾಡುತ್ತಾ ಇಂತಹ ವಿಷಯಗಳು ಹಾಗೂ ಮಹಾತ್ಮರ ಬಗ್ಗೆ ಮಕ್ಕಳ ಪಠ್ಯ ಪುಸ್ತಕದಲ್ಲಿ ನೀಡಿದಾಗ ಇತಿಹಾಸವನ್ನು ಮಕ್ಕಳಿಗೆ ಕನ್ನಡ ನಾಡಿನ ಇತಿಹಾಸವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಶ್ರೀಧರ್, ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ, ಸ್ವರ್ಣಭೂಮಿ ಫೌಂಡೇಷನ್ ಸಂಸ್ಥೆಯ ಸೋಮಶೇಖರ್, ಮಾಸ್ತೆನಹಳ್ಳಿ ನಾರಾಯಣಸ್ವಾಮಿ, ಹೊನ್ನೆನಹಳ್ಳಿ ಕೃಷ್ಣಮೂರ್ತಿ, ವೇಣುಗೋಪಾಲ್, ಈರಣ್ಣ ಇನ್ನು ಹಲವಾರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada