Dailyhunt Logo
  • Light mode
    Follow system
    Dark mode
    • Play Story
    • App Story

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Hindusthan Samachar 2 months ago

ಕೊಪ್ಪಳ, 24 ಮಾರ್ಚ್ (ಹಿ.ಸ.)

ಯಂಕರ್ : ಕೊಪ್ಪಳದ ಬೆಂಕಿನಗರದ ನಿವಾಸಿ 54 ವರ್ಷದ ಖಾಜಾ ಹುಸೇನ್ ತಂದೆ ಮಾಬು ಸಾಬ ಕಳಸಾಪೂರ ಎಂಬ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಕೊಪ್ಪಳ ನಗರ ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಖಾಜಾ ಹುಸೇನ್ ಎಂಬ ವ್ಯಕ್ತಿಯು 2024ರ ಅಕ್ಟೋಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ಬಜಾರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ಶಬನಾ ಬೇಗಂ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 13/2025 ಕಲಂ ಮನುಷ್ಯ ಕಾಣೆ ರಿತ್ಯ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿಯು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ.

ಕಾಣೆಯಾದ ವ್ಯಕ್ತಿಯ ಚಹರೆ: ಖಾಜಾ ಹುಸೇನ್ ತಂದೆ ಮಾಬು ಸಾಬ ಕಳಸಾಪೂರ ವಯಸ್ಸು 54 ವರ್ಷ,ಜಾತಿ ಮುಸ್ಲಿಂ,ಉದ್ಯೋಗ ಬೆಲ್ದಾರ್ ಕೆಲಸ,5.6 ಅಡಿ ಎತ್ತರ,ಸಾದಾಗಪ್ಪು ಮೈಬಣ್ಣ,ಸದೃಡ ಮೈಕಟ್ಟು ಹಾಗೂ ದುಂಡು ಮುಖ ಹೊಂದಿದ್ದಾನೆ.ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.ವ್ಯಕ್ತಿಯು ಕನ್ನಡ,ತೆಲುಗು,ಹಿಂದಿ ಭಾಷೆ ಮಾತನಾಡುತ್ತಾನೆ ಹಾಗೂ ಹಣೆಯ ಮೇಲಿನ ಕೂದಲು ಉದುರುತ್ತವೆ.

ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ ನಂ: 08539 230100 ಮತ್ತು 230222. ಅಥವಾ ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ ಸಂ: 9480803745 ಹಾಗೂ ಕೊಪ್ಪಳ ನಗರ ಠಾಣೆ ದೂರವಾಣಿ ನಂ: 08539.220333 ಸಂಪರ್ಕಿಸಲು ಕೊಪ್ಪಳ ನಗರ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada