ಜಮ್ಮು,ಜೂ.21 : ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷ ಪವಿತ್ರ ಅಮರನಾಥ ಯಾತ್ರೆ ಯನ್ನು ಜಮ್ಮು-ಕಾಶ್ಮೀರ ಆಡಳಿತ ರದ್ದು ಮಾಡಿದೆ.
ಆನ್ ಲೈನ್ ಮೂಲಕ ದರ್ಶನಕ್ಕೆ ಜಮ್ಮು-ಕಾಶ್ಮೀರದ ಅಮರನಾಥ ಯಾತ್ರಾ ಮಂಡಳಿ ಅನುವು ಮಾಡಿಕೊಟ್ಟಿದೆ.
ದೇಶ, ವಿದೇಶದಲ್ಲಿರುವ ಭಕ್ತಾದಿಗಳು ಆನ್ಲೈನ್ ಮೂಲಕ ಅಮರನಾಥ ದರ್ಶನವನ್ನು ಆನ್ ಲೈನ್ ಮೂಲಕ ಪಡೆಯಬಹುದು. ಇದಕ್ಕಾಗಿ ಎಲ್ಲ ರೀತಿಯ ಅವಕಾಶ ಮಾಡಿಕೊಡಲಾಗಿದೆ ಅಮರನಾಥ ಯಾತ್ರಾ ಮಂಡಳಿ ತಿಳಿಸಿದೆ.
ಅಮರನಾಥ ಯಾತ್ರೆ ರದ್ದುಗೊಂಡಿದ್ದರೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಆನ್ ಲೈನ್ ಮೂಲಕ ದರ್ಶನ ಮುಂದುವರೆಯಲಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಅವರು, ಆನ್ ಲೈನ್ ನಲ್ಲಿ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಓದಿ
ಜೂನ್ 28 ರಿಂದ ಆರಂಭವಾಗಿ ಆಗಸ್ಟ್ 22 ರವರೆಗೆ ಅಮರನಾಥ ಯಾತ್ರೆ ನಿಗದಿಯಾಗಿತ್ತು. 56 ದಿನಗಳ ಯಾತ್ರೆ ಕೊರೊನಾ ಸೋಂಕಿನಿಂದ ರದ್ದಾಗಿದೆ.

