Dailyhunt
ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫೨ ಕರೋನ ಸೋಂಕು ದೃಢ

ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫೨ ಕರೋನ ಸೋಂಕು ದೃಢ

ಚಿಕ್ಕಮಗಳೂರು,ಜೂನ್ ೨೧(ಹಿ.ಸ): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕರೋನ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಮುಂದುವರಿಸಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯಲ್ಲಿ ಸೋಮವಾರ ೧೫೨ ಕರೋನ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದೆ.

ಸೋಂಕಿಗೆ ಜಲ್ಲೆಯಲ್ಲಿ ಇಂದೂ ಸಹ ೩ ಮಂದಿ ಬಲಿಯಾಗಿದ್ದು ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ಮುನ್ನೂರು ದಾಟಿದ್ದು ಇದುವರಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೩೨೫ ಕ್ಕೆ ಮುಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ೨೩೬೦ ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಯಿಂದ ಗುಣಮುಖರಾಗಿ ಇದುವರಗೆ ೪೧೮೫೮ ಮಂದಿ ಬಿಡುಗಡೆಯಾಗಿದ್ದಾರೆ.


ಹಿಂದೂಸ್ತಾನ್ ಸಮಾಚಾರ್/ಎಸ್.ಕೆ/ಮ.ಯ

Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada