ಬೆಂಗಳೂರು,ಜೂ.21: ಡ್ರಗ್ಸ್ ಮಾರಾಟ ಸರಬರಾಜು ವಿರುದ್ಧ ಕಾರ್ಯಾಚರಣೆ ತೀವ್ರ ಗೊಳಿಸಿರುವ ಪೂರ್ವ ವಿಭಾಗದ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ರೌಡಿ ಪಪ್ಪು ಅಲಿಯಾಸ್ ಅಮೀರ್ ಖಾನ್ ನನ್ನು ಬಂಧಿಸಿದ್ದಾರೆ.
ಶಿವಾಜಿನಗರ ರೌಡಿಶೀಟರ್ ದಿವಂಗತ ಕೋಳಿ ಫಯಾಜ್ ಪುತ್ರನಾಗಿರುವ ರೌಡಿ ಪಪ್ಪು ಅಲಿಯಾಸ್ ಅಮೀರ್ ಖಾನ್ ಅಪರಾಧ ಕೃತ್ಯವೊಂದರಲ್ಲಿ ಜೈಲಿಗೆ ಹೋಗಿ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.
ಜೈಲಿನಿಂದ ಹೊರಗೆ ಬಂದ ಮೇಲೆ ಬುದ್ಧಿ ಕಲಿಯದೇ ಚಾಳಿಗೆ ಬಿದ್ದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಖಾಕಿ ಬಲೆಗೆ ಬಿದ್ದಿದ್ದಾನೆ.
ರೌಡಿ ಶೀಟರ್ ಪಪ್ಪು ಅಲಿಯಾಸ್ ಅಮೀರ್ ಖಾನ್ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ವೇಳೆ ಶಿವಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
