ಚಿತ್ರದುರ್ಗ,ಜೂ.21(ಹಿ.ಸ): ಜಿಲ್ಲೆಯಲ್ಲಿ ಕೋವಿಡ್ ಹೊಸ ಮಾರ್ಗದರ್ಶಿ ನಿಯಮವೂ ನಾಳೆಯಿಂದ ಜಾರಿಗೆ ಬರಲಿದ್ದು, ಬೆಳಗ್ಗೆ 5 ರಿಂದ ಸಂಜೆ 5 ರವರೆಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ನಡೆಸಬಹುದಾಗಿದೆ ಎಂದು ಎಸ್ಪಿ ರಾಧಿಕಾ ಹೇಳಿದರು.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಹೊಸ ನಿಯಮ ಜಾರಿಗೊಳ್ಳಲಿದೆ.ನಾಳೆ ಬೆಳಗ್ಗೆ 5 ರಿಂದ ಸಂಜೆ 5 ರವೆಗೆರೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳು ನಡೆಯಲು ಅವಕಾಶ ನೀಡಲಾಗಿದೆ.
ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಹೋಟೇಲ್ ಗಳಲ್ಲಿ ಶೇ50 ರಷ್ಟು ಜನರನ್ನು ಕೂರಿಸಿ ಸರ್ವೀಸ್ ಮಾಡಬಹುದಾಗಿದೆ. ಬೀದಿ ಬದಿಯ ವ್ಯಾಪಾರಗಳನ್ನು ಸಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಮಾಡಿಕೊಂಡು ವ್ಯಾಪಾರ ಮಾಡಬೇಕು ವೀಕೇಂಡ್ ಲಾಕ್ ಡೌನ್ ನಲ್ಲಿ ಬೆಳಗ್ಗೆ 6 ರಿಂದ ಮದ್ಯಾಹ್ನ 2 ರವೆರೆಗೆ ವ್ಯಾಪಾರ ಚಟುವಟಿಕೆಗಳು ನಡೆಯಲಿವೆ.
ಹಿಂದೂಸ್ತಾನ್ ಸಮಾಚಾರ್/ಪ್ರಬಿ/ಎಂವೈ

