Dailyhunt
ಒಂದೇ ದಿನ 69 ಲಕ್ಷಕ್ಕೂ  ಹೆಚ್ಚು ಜನರಿಗೆ ಉಚಿತ ಲಸಿಕೆ

ಒಂದೇ ದಿನ 69 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಲಸಿಕೆ

ನವದೆಹಲಿ, ಜೂ.21 : ದೇಶದಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕುವ ಅಭಿಯಾನ ಇಂದಿನಿಂದ ಆರಂಭವಾಗಿದ್ದು ಮೊದಲ ದಿನವೇ ಬರೊಬ್ಬರಿ 69 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿ ದಾಖಲೆ ಬರೆದಿದೆ.

47,51,080 ಮಂದಿಗೆ ಲಸಿಕೆ ಹಾಕುವ ಮೂಲಕ ಒಂದು ದಿನದಲ್ಲಿ ಇದುವರೆಗೆ ಅತಿ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.

ಇಂದಿನಿಂದ ದೇಶದಾದ್ಯಂತ ಉಚಿತವಾಗಿ 18 ವರ್ಷದಿಂದ ದಾಟಿದ ಎಲ್ಲಾ ಜನರಿಗೆ ಲಸಿಕೆ ಹಾಕುವ ಚಾಲನೆ ನೀಡಲಾಗಿತ್ತು ಸಂಜೆ 4 ಗಂಟೆಯ ತನಕ 47 ಲಕ್ಷಕ್ಕೂ ಹೆಚ್ಚಿನ ಜನರಿಗೆ ಲಸಿಕೆ ಹಾಕಲಾಗಿದೆ.

18 ವರ್ಷದ ದಾಟಿದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಡಿಸೆಂಬರ್ ಒಳಗೆ ದೇಶದ ಎಲ್ಲರಿಗೂ ಲಸಿಕೆ ಹಾಕಲು ನಿರ್ಧರಿಸಲಾಗಿದೆ‌


ಔಷಧ ತಯಾರಿಕಾ ಸಂಸ್ಥೆಗಳಿಂದ ಕೇಂದ್ರ ಸರ್ಕಾರ ಶೇಕಡ 75ರಷ್ಟು ಲಸಿಕೆಯನ್ನು ಖರೀದಿ ಮಾಡುತ್ತಿದ್ದು ಶೇಕಡಾ 25ರಷ್ಟನ್ನು ರಾಜ್ಯಗಳು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆಗೆ ಅನುಗುಣವಾಗಿ ಲಸಿಕೆಯನ್ನು ಕೇಂದ್ರ ಸರ್ಕಾರ ಕೇಂದ್ರಿಕೃತ ವ್ಯವಸ್ಥೆಗೆ ಪೂರೈಕೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆ ಪೂರೈಕೆ ಮಾಡಲು ನಿರ್ಧರಿಸಿದೆ.

ದೇಶದಲ್ಲಿ ಜನವರಿ 16 ರಿಂದ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದ್ದು ಇದುವರೆಗೂ ಒಂದೇ ದಿನ ಹೆಚ್ಚಿನ ಜನರಿಗೆ ಲಸಿಕೆ ಹಾಕಿದ ಹೆಗ್ಗಳಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಜನವಾಗಿದೆ



Dailyhunt
Disclaimer: This content has not been generated, created or edited by Dailyhunt. Publisher: Hindusthan Samachar Kannada