Dailyhunt Logo
  • Light mode
    Follow system
    Dark mode
    • Play Story
    • App Story
20 ವರ್ಷಗಳ ಬಳಿಕ ಬಂಗಾಳಕ್ಕೆ ಮರಳಿದ ಲೇಖಕಿ ನಸ್ರೀನ್‌

20 ವರ್ಷಗಳ ಬಳಿಕ ಬಂಗಾಳಕ್ಕೆ ಮರಳಿದ ಲೇಖಕಿ ನಸ್ರೀನ್‌

Hosadigantha 3 weeks ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೋಲ್ಕತ್ತಾ ತೊರೆದ 20 ವರ್ಷಗಳ ಬಳಿಕ ಬಾಂಗ್ಲಾದಿಂದ ಗಡೀಪಾರಾಗಿದ್ದ ಸ್ತ್ರೀವಾದಿ, ಲೇಖಕಿ, ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ವಾಪಸ್​ ಮತ್ತೆ ಕೋಲ್ಕತ್ತಾಗೆ ಆಗಮಿಸಿದ್ದಾರೆ.

ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಸ್ರೀನ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಕೋಲ್ಕತ್ತಾ ತುಂಬಾ ಇಷ್ಟ.

ಮತ್ತೆ ಇಲ್ಲಿಗೆ ಬಂದಿರುವುದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

2007ರಲ್ಲಿ ತಮ್ಮ ಆತ್ಮಚರಿತ್ರೆ 'ದ್ವಿಖಂಡಿತೋ' ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಆಗಿನ ಪಶ್ಚಿಮ ಬಂಗಾಳ ಸರ್ಕಾರ ಸಿಪಿಎಂ ಅವರನ್ನು 63 ವರ್ಷಗಳ ಕಾಲ ರಾಜ್ಯ ತೊರೆಯಲು ಆದೇಶಿಸಿತ್ತು. ಆ ಘಟನೆಯ ಬಳಿಕ ಅವರು ಕಳೆದ 20 ವರ್ಷಗಳಿಂದ ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಪ್ರಸ್ತುತ ತಸ್ಲೀಮಾ ನಸ್ರೀನ್ ದೀರ್ಘಾವಧಿಯ ನಿವಾಸ ಪರವಾನಗಿಯೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಈ ಬಾರಿ ಕೋಲ್ಕತ್ತಾದಲ್ಲಿ ನಡೆಯಲಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ತಮ್ಮ ಕವಿತೆಗಳನ್ನು ವಾಚಿಸಿ ಚರ್ಚೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha