Dailyhunt
3 ಕೋಟಿ ರೂ ಡಿಫೆಂಡರ್ ಈಗ ಟ್ಯಾಕ್ಸಿ! ಸಿಲಿಕಾನ್ ಸಿಟಿಯಲ್ಲಿ ಮಾತ್ರ ಹೀಗಾಗೋಕೆ ಸಾಧ್ಯ

3 ಕೋಟಿ ರೂ ಡಿಫೆಂಡರ್ ಈಗ ಟ್ಯಾಕ್ಸಿ! ಸಿಲಿಕಾನ್ ಸಿಟಿಯಲ್ಲಿ ಮಾತ್ರ ಹೀಗಾಗೋಕೆ ಸಾಧ್ಯ

Hosadigantha 1 week ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಅಂದ್ರೆ ಸೆಲೆಬ್ರಿಟಿಗಳು, ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತರ ಸ್ಟೇಟಸ್ ಸಿಂಬಲ್ ಎಂದು ಗುರುತಿಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ಐಷಾರಾಮಿ SUV ಹೊಸ ಅವತಾರದಲ್ಲಿ ಗಮನ ಸೆಳೆಯುತ್ತಿದೆ.

ಕೋಟ್ಯಂತರ ರೂಪಾಯಿ ಮೌಲ್ಯದ ಡಿಫೆಂಡರ್ ಈಗ ಟ್ಯಾಕ್ಸಿಯಾಗಿ ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯ ವೈಭವ ಮತ್ತು ವಿಭಿನ್ನ ಲೈಫ್‌ಸ್ಟೈಲ್‌ನ್ನು ಮತ್ತೆ ಒಮ್ಮೆ ಹೈಲೈಟ್ ಮಾಡಿದೆ.

ಈ ದುಬಾರಿ ಕಾರು ಯಾರದ್ದೆಂದರೆ, ಬೆಂಗಳೂರು ಮೂಲದ ಪ್ರಸಿದ್ಧ ಉದ್ಯಮಿ ಹಾಗೂ 'ರೋಲ್ಸ್ ರಾಯ್ಸ್ ಬಾಬು' ಎಂದೇ ಖ್ಯಾತರಾಗಿರುವ ರಮೇಶ್ ಬಾಬು ಅವರ ಟ್ರಾವೆಲ್ಸ್ ಕಂಪನಿಯದ್ದಾಗಿದೆ. ಐಷಾರಾಮಿ ಕಾರುಗಳ ಬಾಡಿಗೆ ಸೇವೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಅವರು, ತಮ್ಮ ಲಿಸ್ಟ್ ಗೆ ಡಿಫೆಂಡರ್ ಕಾರನ್ನೂ ಸೇರಿಸಿದ್ದಾರೆ.

ಇದನ್ನೂ ಓದಿ:

ರಮೇಶ್ ಬಾಬು ಬಳಿ ಡಿಫೆಂಡರ್ ಮಾತ್ರವಲ್ಲದೆ ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ರೇಂಜ್ ರೋವರ್ ಸೇರಿದಂತೆ ಹಲವು ಹೈಎಂಡ್ ಕಾರುಗಳಿವೆ. ಮದುವೆ, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಈ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಫೆಂಡರ್ ಟ್ಯಾಕ್ಸಿಯ ಫೋಟೋಗಳು ಹರಿದಾಡುತ್ತಿದ್ದು, "ಇದು ಬೆಂಗಳೂರು ಮಾತ್ರ ಮಾಡಬಲ್ಲದ್ದು" ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಪ್ರಚಾರದ ಗಿಮಿಕ್ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha