Dailyhunt Logo
  • Light mode
    Follow system
    Dark mode
    • Play Story
    • App Story
ಆಂಬುಲೆನ್ಸ್‌ಗೆ ಜಾಗ ಬಿಡದೇ ವ್ಹೀಲಿಂಗ್‌ ಹುಚ್ಚಾಟ ಮಾಡಿದ್ದ ಆರು ಅಪ್ರಾಪ್ತ ವಯಸ್ಕರು ಪೊಲೀಸರ ವಶಕ್ಕೆ

ಆಂಬುಲೆನ್ಸ್‌ಗೆ ಜಾಗ ಬಿಡದೇ ವ್ಹೀಲಿಂಗ್‌ ಹುಚ್ಚಾಟ ಮಾಡಿದ್ದ ಆರು ಅಪ್ರಾಪ್ತ ವಯಸ್ಕರು ಪೊಲೀಸರ ವಶಕ್ಕೆ

Hosadigantha 1 week ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಂಬುಲೆನ್ಸ್‌ಗೆ ಜಾಗ ಬಿಡದೇ ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡುತ್ತಾ ಹುಚ್ಚಾಟ ಮೆರದಿದ್ದ ಆರು ಅಪ್ರಾಪ್ತ ವಯಸ್ಕರನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಲೈ ನಾಲ್ಕರ ಮಧ್ಯರಾತ್ರಿ ಯಶವಂತಪುರದಲ್ಲಿ ಈ ಆರು ಮಂದಿ ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡುತ್ತಾ, ಗಲಾಟೆ ಮಾಡುತ್ತಾ ಆಂಬುಲೆನ್ಸ್‌ ಹಿಂದಿದ್ದರೂ ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಗಾಡಿ ಓಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಯಶವಂತಪುರ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದು, ಆರು ಅಪ್ರಾಪ್ತ ವಯಸ್ಕ ವ್ಹೀಲರ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha