Dailyhunt Logo
  • Light mode
    Follow system
    Dark mode
    • Play Story
    • App Story
ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ

ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ

Hosadigantha 1 week ago

ಹೊಸದಿಗಂತ ಡಿಜಿಟಲ್ ಡೆಸ್ಕ್:ಕೆಪಿಸಿಸಿ ಕಾರ್ಯದರ್ಶಿ ಕನಿಷ್ಠ ವೇತನ ಸಲಹಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ತಮ್ಮ ಪತ್ನಿಗೆ ಆಸ್ತಿ ಹಾಗೂ ದಾಖಲೆ ಪತ್ರಗಳಲ್ಲಿ ಅಕ್ರಮವೆಸೆಗಿ ಅಧಿಕಾರ ದುರಪಯೋಗಪಡಿಸಿ ತಲಾಕ್ ನೀಡಿ ಇನ್ನೊಂದು ಮದುವೆಗೆ ಸಿದ್ದರಾಗುತ್ತಿದ್ದಾರೆ ಎಂದು ಪತ್ನಿ ಶಮಾ ಶಾಹೀದ್ ಗಂಭೀರ ಆರೋಪ ಮಾಡಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 25 ವರ್ಷಗಳ ನಾವು ದಂಪತಿಯಾಗಿದ್ದೇವೆ. ಇದರಲ್ಲಿ 9 ವರ್ಷಗಳಿಂದ ತಾನು ತಾಯಿಯ ಮನೆಯಲ್ಲೆ ವಾಸಿಸುತ್ತಿದ್ದೇನೆ. ತಂದೆಯವರು ಕೇರಳ ರಾಜ್ಯದಲ್ಲಿನ ಜಮೀನು ಮಾರಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಜಾಗ ಖರೀದಿಸಿದ್ದು ಇದರಲ್ಲಿ ಇರುವ ಕಟ್ಟಡಗಳ ಬಾಡಿಗೆ ಸಹಿತ ಎಲ್ಲಾವನ್ನು ಅವರೇ ಪಡೆಯುತ್ತಿದ್ದಾರೆ. ಈಗ ನನಗೆ ತಲಾಖ್ ನೀಡಿ ಆ ಪತ್ರಕ್ಕೆ ಸಹಿ ಹಾಕಿದ್ದು ಇದೀಗ ಎರಡನೇ ಮದುವೆಯ ಸಿದ್ದತೆಯಲ್ಲಿ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದಲ್ಲದೇ ಮದುವೆ ಸಂಧರ್ಭದ 100 ಪವನ್ ಚಿನ್ನವನ್ನು ಮಾರಟ ಮಾಡಿದ್ದಾರೆ. ಇದನ್ನು ಮರಳಿ ನೀಡಬೇಕು, ಪವಾರ್ ಆಫ್ ಆಟಾರ್ನಿ ಬಳಸಿಕೊಂಡು ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಈ ಪವಾರ್ ಆಫ್ ಅಟಾರ್ನಿ ರದ್ದು ಪಡಿಸಿದ ಬಳಿಕವು ವ್ಯವಹಾರ ನಡೆಸಿದ್ದಾರೆ, ಸಾಲ ನೀಡಿದ ಸಹಕಾರಿ ಸಂಘದಲ್ಲಿ ಆಸ್ತಿ ಜಪ್ತಿಗೆ ಬಂದ ಸಂಧರ್ಭದಲ್ಲಿ 18 ಲಕ್ಷ ರೂಪಾಯಿಗಳನ್ನು ನಾನೇ ಕಟ್ಟಿದ್ದೇನೆ, ಕಾಗದ ಪತ್ರಗಳನ್ನು ನೀಡುತ್ತೇನೆ ಎಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇವುಗಳನ್ನು ಗಾಳಿಯಲ್ಲಿ ತೂರಿ ನನ್ನ ಗಮನಕ್ಕೆ ಬರದೇ ಕಟ್ಟಡಡಲ್ಲಿ ಬಾಡಿಗೆ ದಾರರಿಂದ 2-6 ಲಕ್ಷ ರೂಪಾಯಿಗಳ ವರೆಗೆ ಠೇವಣಿ ಪಡೆದು ನೀಡಿದ್ದು ಅಲ್ಲಿನ ಬಾಡಿಗೆ ದಾರರಲ್ಲಿ ಮಾತನಾಡಿದಾಗ ಅವರು ಟಿ.ಎಂ ಶಾಹೀದ್ ರನ್ನು ತೋರಿಸಿ ಈಗ ಅವರು ಹೇಳಿದ ಹಾಗೆ ಎಂದು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮದುವೆ ಸಂಧರ್ಭದಲ್ಲಿ ನನ್ನ ತಂದೆ ನೀಡಿದ ಒಟ್ಟು ಎರಡು ಕೋಟಿ ಮೌಲ್ಯದ ಆಸ್ತಿಗಳನ್ನು ಮರಳಿ ನೀಡಬೇಕು, ಅಲ್ಲದೇ ತೆಕ್ಕಿಲ್ ಗ್ಯಾಸ್ ಏಜನ್ಸಿಯನ್ನು ಸಾಲದ ಮೂಲಕ ಪ್ರಾರಂಭಿಸಿದ್ದು ಅದು ನನ್ನ ಒಡೆತನವಾಗಿದೆ. ಇದರ ಪಾಲುದಾರರಾಗಿ ಅವರು ಇದ್ದಾರೆಯೇ ಹೊರತು ಅದರ ಮಾಲಕರಲ್ಲ ಅವರು ಇದರಲ್ಲಿನ ಸುಮಾರು 2.5 ಲಕ್ಷ ರೂಪಾಯಿಗಳ ಲಾಭಗಳು ದೊರೆಯುತ್ತಿದ್ದು ಲಾಭವನ್ನು ನೀಡದೇ ಪ್ರಶ್ನಿಸಿದ ಸಂದರ್ಭ ಪ್ರಧಾನಿ, ಮುಖ್ಯಮಂತ್ರಿಗಳ ಬಳಿಗೆ ಬೇಕಾದರೂ ಹೋಗು, ನನ್ನನ್ನು ಏನು ಮಡುಲು ಸಾಧ್ಯವಿಲ್ಲ ಎಂದು ಬೆದರಿಸುತ್ತಿದ್ದಾರೆ. ಅಲ್ಲದೇ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಕೂಡಾ ಸುದ್ದಿಗೋಷ್ಟಿಯಲ್ಲಿ ಅವರು ಅಳಲು ತೋಡಿಕೊಂಡರು.
ರಾಜಕೀಯ ಪ್ರಭಾವ ಬಳಸಿಕೊಂಡು ಸಹಿ ಹಾಕಿಸಲಾಗಿದೆ.

ರೆಡ್ ಅಲರ್ಟ್ ಬೆನ್ನಲ್ಲೇ ವಯನಾಡಿನಲ್ಲಿ ಕಟ್ಟುನಿಟ್ಟಿನ ಕ್ರಮ: ಕ್ವಾರಿ, ಟ್ರೆಕ್ಕಿಂಗ್, ಸಾಹಸ ಪ್ರವಾಸೋದ್ಯಮಕ್ಕೆ ತಾತ್ಕಾಲಿಕ ಬೀಗ

ಸಚಿವರುಗಳು ಮತ್ತು ನಾಯಕರ ಸಮ್ಮುಖದಲ್ಲಿ ಮಾತುಕತೆಯಾಗಿ 75 ಲಕ್ಷ ರೂಪಾಯಿಗಳನ್ನು ನೀಡುವಂತೆ ಮಾತುಕತೆಯಾಗಿತ್ತು. ಅಲ್ಲದೇ ಕರೋನ ಸಂಧರ್ಭದಲ್ಲಿ ಗ್ಯಾಸ್ ಏಜನ್ಸಿ ರಿನಿವಲ್ ವಿಚಾರವಾಗಿ ದೂರವಾಣಿ ಕರೆಯ ಮೂಲಕ ಸಲೀಂ ಅಹಮ್ಮದ್ ತಿಳಿಸಿದ ಮೇರೆಗೆ ಸಹಿ ಹಾಕಲಾಗಿದ್ದು ಜೊತೆಗೆ ನನ್ನ ಕಟ್ಟಡಗಳಿಗೆ ಬ್ಯಾಂಕ್ ಸಾಲ ಹಾಗೂ ಮಾರಟ ಮಾಡದಂತೆ ನನಿಗೆ ನ್ಯಾಯಾಲಯದಿಂದ ನಿರ್ಬಂಧವನ್ನು ತಂದಿದ್ದು ಜೊತೆಗೆ ಅವರ ಬಳಿಯಲ್ಲಿ ಗನ್ ಕೂಡ ಇದೆ. ಈ ಬಗ್ಗೆ ಮಹಿಳಾ ಆಯೋಗಕ್ಕು ಈಮೈಲ್ ಮೂಲಕ ದೂರು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಕಣ್ಣೀರಾದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha