Dailyhunt Logo
  • Light mode
    Follow system
    Dark mode
    • Play Story
    • App Story
ಅಬ್ರಹಾಂ ಲಿಂಕನ್ ನೌಕೆಯ ಮೇಲೆ ಸರಣಿ ಕ್ಷಿಪಣಿ ದಾಳಿ: ಇರಾನ್ ಅಬ್ಬರಕ್ಕೆ ನಡುಗಿದ ಅಮೆರಿಕನ್ ಸೈನ್ಯ

ಅಬ್ರಹಾಂ ಲಿಂಕನ್ ನೌಕೆಯ ಮೇಲೆ ಸರಣಿ ಕ್ಷಿಪಣಿ ದಾಳಿ: ಇರಾನ್ ಅಬ್ಬರಕ್ಕೆ ನಡುಗಿದ ಅಮೆರಿಕನ್ ಸೈನ್ಯ

Hosadigantha 1 month ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ಗಾಢವಾಗಿದ್ದು, ಇರಾನ್ ಹಾಗೂ ಅಮೆರಿಕ-ಇಸ್ರೇಲ್ ಪಡೆಗಳ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದೆ. ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಾಖಂಡಿತವಾಗಿ ತಿರಸ್ಕರಿಸಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಶೇ. 20 ರಷ್ಟು ಪಾಲನ್ನು ಹೊಂದಿರುವ ಕಾರ್ಯತಂತ್ರದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಮುಚ್ಚಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಲಕ್ಷಣಗಳಿದ್ದು, ಇಂಧನ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಅಮೆರಿಕದ ಆರ್ಥಿಕ ದಿಗ್ಬಂಧನಗಳ ವಿರುದ್ಧ ಪ್ರತಿಭಟಿಸಲು ಇರಾನ್ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಬೃಹತ್ ವಿಮಾನವಾಹಕ ನೌಕೆ 'ಅಬ್ರಹಾಂ ಲಿಂಕನ್' ವಿರುದ್ಧ ಇರಾನ್ ಕನಿಷ್ಠ ಏಳು ಬಾರಿ ಕ್ಷಿಪಣಿ ಕಾರ್ಯಾಚರಣೆ ನಡೆಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ದಾಳಿಗಳಿಂದಾಗಿ ಅಮೆರಿಕದ ಯುದ್ಧ ವಿಮಾನಗಳು ನೌಕೆಯಿಂದ ಕಾರ್ಯಾಚರಣೆ ನಡೆಸದಂತೆ ತಡೆಯಲಾಗಿದೆ ಎಂಬುದು ಇರಾನ್‌ನ ವಾದವಾಗಿದೆ.

ಶತ್ರು ಪಡೆಗಳಿಗೆ ಭೀತಿ ಹುಟ್ಟಿಸುವ ಹೊಸ ಆಯುಧವೊಂದನ್ನು ಬಳಸುವುದಾಗಿ ಇರಾನ್ ಘೋಷಿಸಿದೆ. ಈ ಕುರಿತು ಅಣಕವಾಡಿದ ಅಡ್ಮಿರಲ್ ಇರಾನಿ, "ಆ ಆಯುಧ ಅವರ ಪಕ್ಕದಲ್ಲೇ ಇದೆ, ಅದನ್ನು ಕಂಡು ಅವರಿಗೆ ಹೃದಯಾಘಾತವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಎಚ್ಚರಿಸಿದ್ದಾರೆ. ಅಮೆರಿಕನ್ನರು ಸೊಮಾಲಿ ಕಡಲ್ಗಳ್ಳರಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಪರಮಾಣು ಮಾತುಕತೆ ಮತ್ತು ಹಾರ್ಮುಜ್ ಜಲಸಂಧಿ ತೆರೆಯುವ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. "ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡುವುದಿಲ್ಲ. ಅವರಿಗೆ ಬಾಂಬ್ ದಾಳಿಗಿಂತ ನಮ್ಮ ಆರ್ಥಿಕ ದಿಗ್ಬಂಧನಗಳೇ ಹೆಚ್ಚು ಪರಿಣಾಮಕಾರಿಯಾಗಿ ತಟ್ಟಲಿವೆ" ಎಂದು ಟ್ರಂಪ್ ಗುಡುಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha