Dailyhunt
ಅಮೆರಿಕ ದಾಳಿಗೆ ಪ್ರತೀಕಾರ | ಹಿಟ್‌ಲಿಸ್ಟ್‌ ರೆಡಿ ಮಾಡ್ಕೊಂಡ ಇರಾನ್: ಆ 8 ಸೇತುವೆಗಳೇ ಟಾರ್ಗೆಟ್

ಅಮೆರಿಕ ದಾಳಿಗೆ ಪ್ರತೀಕಾರ | ಹಿಟ್‌ಲಿಸ್ಟ್‌ ರೆಡಿ ಮಾಡ್ಕೊಂಡ ಇರಾನ್: ಆ 8 ಸೇತುವೆಗಳೇ ಟಾರ್ಗೆಟ್

Hosadigantha 1 month ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆರಿಕದ ವಾಯುದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಟೆಹ್ರಾನ್ ಸಮೀಪದ ಕರಾಜ್ ನಗರದ ಪ್ರಮುಖ B1 ಸೇತುವೆ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಗಲ್ಫ್ ರಾಷ್ಟ್ರಗಳಲ್ಲಿರುವ ಹಲವು ಪ್ರಮುಖ ಸೇತುವೆಗಳು ಇದೀಗ ಇರಾನ್‌ನ "ಹಿಟ್‌ಲಿಸ್ಟ್"ನಲ್ಲಿ ಸೇರಿವೆ ಎಂಬ ವರದಿಗಳು ಹೊರಬಿದ್ದಿವೆ.

ಇರಾನ್ ಮಾಧ್ಯಮಗಳಿಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಕುವೈತ್, ಯುಎಇ, ಸೌದಿ ಅರೇಬಿಯಾ-ಬಹ್ರೇನ್ ಮತ್ತು ಜೋರ್ಡಾನ್‌ನ ಒಟ್ಟು ಎಂಟು ಪ್ರಮುಖ ಸೇತುವೆಗಳು ಸಾಧ್ಯ ಗುರಿಗಳಾಗಿ ಗುರುತಿಸಲಾಗಿದೆ.

ಹಿಟ್‌ಲಿಸ್ಟ್‌ನಲ್ಲಿ ಕುವೈತ್‌ನ ಶೇಖ್ ಜಾಬರ್ ಅಲ್ ಅಹ್ಮದ್ ಸಮುದ್ರ ಸೇತುವೆ, ಅಬುಧಾಬಿಯ ಶೇಖ್ ಜಾಯೆದ್, ಖಲೀಫಾ ಮತ್ತು ಅಲ್ ಮಕ್ತಾ ಸೇತುವೆಗಳು, ಸೌದಿ ಅರೇಬಿಯಾ-ಬಹ್ರೇನ್ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ, ಜೊತೆಗೆ ಜೋರ್ಡಾನ್‌ನ ಕಿಂಗ್ ಹುಸೇನ್, ದಾಮಿಯಾ ಮತ್ತು ಅಬ್ದೌನ್ ಸೇತುವೆಗಳು ಸೇರಿವೆ ಎಂದು ತಿಳಿದುಬಂದಿದೆ. ಇವು ಆಯಾ ದೇಶಗಳ ಸಾರಿಗೆ ಮತ್ತು ಆರ್ಥಿಕ ವ್ಯವಸ್ಥೆಗೆ ಅತ್ಯಂತ ಪ್ರಮುಖ ಮೂಲಸೌಕರ್ಯಗಳಾಗಿವೆ.

ಇದನ್ನೂ ಓದಿ:

ತಮಿಳುನಾಡು ಎಲೆಕ್ಷನ್ | ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಅಣ್ಣಾಮಲೈ ಹೆಸರು ಮಿಸ್ಸಿಂಗ್

ಈ ಬೆಳವಣಿಗೆಗೆ ಕಾರಣವಾಗಿರುವುದು ಅಮೆರಿಕ ನಡೆಸಿದ B1 ಸೇತುವೆ ಮೇಲಿನ ದಾಳಿ. ಟೆಹ್ರಾನ್ ಮತ್ತು ಕರಾಜ್ ನಗರಗಳನ್ನು ಸಂಪರ್ಕಿಸುವ ಈ ಸೇತುವೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಿಂದ ಸೇತುವೆಯ ಒಂದು ಭಾಗ ಕುಸಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬೆಳವಣಿಗೆಗಳಿಂದ ಗಲ್ಫ್ ಪ್ರದೇಶದಲ್ಲಿ ಭದ್ರತಾ ಆತಂಕ ಹೆಚ್ಚಿದ್ದು, ಯುದ್ಧವು ಮತ್ತಷ್ಟು ವಿಸ್ತರಿಸುವ ಭೀತಿ ವ್ಯಕ್ತವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha