Dailyhunt Logo
  • Light mode
    Follow system
    Dark mode
    • Play Story
    • App Story
ಬಡವರಿಗಾಗಿ ಶೌಚಾಲಯ ನಿರ್ಮಾಣ ಮಾಡುತ್ತೀವಿ ಎಂದಾಗ ಎಲ್ಲರೂ ನಕ್ಕಿದ್ದರು: ಪ್ರಧಾನಿ ಮೋದಿ

ಬಡವರಿಗಾಗಿ ಶೌಚಾಲಯ ನಿರ್ಮಾಣ ಮಾಡುತ್ತೀವಿ ಎಂದಾಗ ಎಲ್ಲರೂ ನಕ್ಕಿದ್ದರು: ಪ್ರಧಾನಿ ಮೋದಿ

Hosadigantha 1 day ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಡವರಿಗಾಗಿ ಶೌಚಾಲಯ ನಿರ್ಮಿಸುತ್ತೇನೆ ಎಂದು ಘೋಷಣೆ ಮಾಡಿದಾಗ ಸಂಸತ್‌ನಲ್ಲಿ ಗೇಲಿ ಮಾಡಿದ್ದರು. ಆದರೆ ಈಗ ಅದರಿಂದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿರುವ ಐಐಟಿ ಖರಗ್‌ಪುರದ ಪ್ಲಾಟಿನಂ ಜುಬಿಲಿ (75ನೇ ವರ್ಷದ) ಸಂಭ್ರಮಾಚರಣೆಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಬಡತನ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯನ್ನು ನಮ್ಮ ಸರ್ಕಾರ ಬದಲಾಯಿಸಿದೆ.

ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದಿದ್ದಾರೆ.

ದೇಶದಲ್ಲಿ ಹಲವು ದಶಕಗಳಿಂದ ಬಡತನವನ್ನು ಶಾಶ್ವತ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು. ಬಡತನ ನಿರ್ಮೂಲನೆಗೆ ಘೋಷಣೆಗಳು ಕೇಳಿಬರುತ್ತಿದ್ದರೂ, ನೀತಿ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಹಂತದಲ್ಲಿ ವ್ಯವಸ್ಥೆಯು ಕಡತಗಳಲ್ಲೇ ವಿಷಯವನ್ನು ಮುಚ್ಚಿಡುತ್ತಿತ್ತು. ಜನಸಂಖ್ಯೆ ಹೆಚ್ಚಿರುವುದರಿಂದ ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಇದಕ್ಕೆ ಕಾರಣವಾಗಿತ್ತು ಎಂದು ಮೋದಿ ಹೇಳಿದರು.

ಕೆಂಪುಕೋಟೆಯಿಂದ ಬಡವರಿಗಾಗಿ ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡಿದಾಗ ಎಲ್ಲರೂ ನಕ್ಕಿದ್ದರು. ಇವರೆಂಥ ಪ್ರಧಾನಿ ಬಾತ್‌ರೂಮ್‌ ನಿರ್ಮಾಣದ ಬಗ್ಗೆ ಮಾತನಾಡ್ತಿದ್ದಾರೆ ಎಂದು ಟೀಕೆ ಮಾಡಿದ್ದರು. ಆದರೆ ಮಹಿಳೆಯರು, ತಾಯಂದಿರಿಗೆ ಶೌಚಾಲಯ ಎಷ್ಟು ಅಗತ್ಯ ಎಂಬುದನ್ನು ಟೀಕಿಸಿದವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha