Dailyhunt
ಬಿಜೆಪಿಗೆ ಮತ್ತೆ ಅಧಿಕಾರಕೊಟ್ಟರೆ ಯುಸಿಸಿ ಮೂಲಕ ನುಸುಳುಕೋರರ ನಾಲ್ಕು ಮದುವೆಗೆ ಬೀಳಲಿದೆ ತಡೆ: ಅಸ್ಸಾಂನಲ್ಲಿ ಗುಡುಗಿದ ಅಮಿತ್‌ ಶಾ!

ಬಿಜೆಪಿಗೆ ಮತ್ತೆ ಅಧಿಕಾರಕೊಟ್ಟರೆ ಯುಸಿಸಿ ಮೂಲಕ ನುಸುಳುಕೋರರ ನಾಲ್ಕು ಮದುವೆಗೆ ಬೀಳಲಿದೆ ತಡೆ: ಅಸ್ಸಾಂನಲ್ಲಿ ಗುಡುಗಿದ ಅಮಿತ್‌ ಶಾ!

Hosadigantha 1 week ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಸಾಂ ವಿಧಾನಸಭಾ ಚುನಾವಣೆಯ ಕಾವು ತಾರಕಕ್ಕೇರಿದ್ದು, ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಇಂದು ಚುನಾವಣಾ ಕಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ ನೀಡಿದ್ದಾರೆ.

ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ದುಧೋನಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಶಾ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುತ್ತೇವೆ.

ಈ ಮೂಲಕ ಅಕ್ರಮ ನುಸುಳುಕೋರರ ನಾಲ್ಕು ಮದುವೆಗಳನ್ನು ತಡೆಯುತ್ತೇವೆ ಎಂದು ಹೇಳಿದರು.

ಇಲ್ಲಿ ಅಕ್ರಮ ವಲಸಿಗರ ಆಗಮನ ದೊಡ್ಡ ಸಮಸ್ಯೆಯಾಗಿದ್ದು, ಅದರಲ್ಲೂ ನೆರೆಯ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಇಲ್ಲಿನ ಜನರ ಉದ್ಯೋಗ, ಭೂಮಿ ಮೇಲೆಯೇ ವಕ್ರ ದೃಷ್ಟಿ ಹಾಕುತ್ತಾರೆ. ಆದರೆ ಬಿಜೆಪಿ ಅಂತಹ ಆತಂಕ ದೂರ ಮಾಡಲೆಂದು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುತ್ತಿದ್ದು, ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಅಕ್ರಮ ವಲಸಿಗರಿಂದ ಅಸ್ಸಾಂ ರಾಜ್ಯವನ್ನು ಮುಕ್ತಗೊಳಿಸುವುದಾಗಿ ಶಾ ಭರವಸೆ ನೀಡಿದರು.

ಭಾರತಕ್ಕೆ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ರೆಡಿ: ರಷ್ಯಾದಿಂದ ಸಿಕ್ಕಿತು ಭರವಸೆ!

ರಾಜ್ಯದಲ್ಲಿ ಬುಡಕಟ್ಟು ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ತಮ್ಮದೇ ಕಲ್ಪನೆಯನ್ನು ಹೊಂದಿದ್ದು,ಇದರ ಅನುಷ್ಠಾನಕ್ಕೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಎಂದಿಗೂ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಲಿಲ್ಲ , ಆದರೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವು ತನ್ನ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯನ್ನು ಪಡೆದುಕೊಂಡಿತು ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha