Dailyhunt
'ದೇವರ ಸ್ವಂತ ನಾಡು' ಕೇರಳದಲ್ಲಿ 'ನಮೋ' ಭರ್ಜರಿ ಪ್ರಚಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ!

'ದೇವರ ಸ್ವಂತ ನಾಡು' ಕೇರಳದಲ್ಲಿ 'ನಮೋ' ಭರ್ಜರಿ ಪ್ರಚಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ!

Hosadigantha 2 weeks ago

ಹೊಸ ದಿಗಂತ ಡಿಜಿಟಲ್ ಡೆಸ್ಕ್:

'ದೇವರ ಸ್ವಂತ ನಾಡು' ಕೇರಳದ ಚುನಾವಣಾ ಅಖಾಡಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೇರಳದ ತಿರುವಲ್ಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಮಧ್ಯಪ್ರಾಚ್ಯ ಯುದ್ಧದ ನಡುವೆ ಗಲ್ಫ್​ ರಾಷ್ಟ್ರಗಳು ಭಾರತದ ಕುರಿತು ಕೆಟ್ಟಭಾವನೆ ಮೂಡುವಂತೆ ಮಾಡುವುದು ಕಾಂಗ್ರೆಸ್ ನ ಉದ್ದೇಶ.

ಅದಕ್ಕಾಗಿ ನಾನಾ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು.

ಯುದ್ಧದ ನಡುವೆ ನಮ್ಮ ಮೇಲಿನ ಅಭಿಪ್ರಾಯ ಬದಲಾಗುವಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಗಲ್ಫ್​ ರಾಷ್ಟ್ರಗಳನ್ನು ಕೆರಳಿಸುವ ಹುನ್ನಾರ ನಡೆಸುತ್ತಿದೆ. ಆದರೆ ನಾನು ಕಾಂಗ್ರೆಸ್, ಎಲ್‌ಡಿಎಫ್, ಯುಡಿಎಫ್ ಜನರಿಗೆ ಹೇಳಲು ಬಯಸುತ್ತೇನೆ , ಚುನಾವಣೆ ಬಂದು ಹೋಗುತ್ತವೆ. ಆದರೆ ಗಲ್ಫ್​ ರಾಷ್ಟ್ರದಲ್ಲಿರುವ ಲಕ್ಷಾಂತರ ಕೇರಳಿಗರ ರಕ್ಷಣೆ ಮೊದಲ ಆದ್ಯತೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಒಂದು ಇಂಚು ಭೂಮಿಯನ್ನು ಯಾರೂ ಕಬಳಿಸಲಾರರು: ಅಮಿತ್ ಶಾ

ಭಾರತೀಯರು ಇಂದು ಗಲ್ಫ್​ ರಾಷ್ಟ್ರಗಳಲ್ಲಿ ಸುರಕ್ಷಿತರಾಗಿ ಇದ್ದಾರೆ. ಇದಕ್ಕೆ ಕಾರಣ ಅಲ್ಲಿನ ಜನರಲ್ಲಿ ನಮ್ಮವರು ಎಂಬ ಭಾವನೆ ಇದೆ. ಆದರೆ ನೀವು ಇಲ್ಲಿ ನೀಡುವ ಹೇಳಿಕೆಗಳಿಂದ ಆ ಭಾವನೆ ದೂರವಾಗಿ ಅಲ್ಲಿ ನೆಲೆಸಿರುವ ನಮ್ಮ ಜನರಿಗೆ ತೊಂದರೆಯಾಗಬಹುದು. ಹೀಗಾಗಿ ಅಸಂಬದ್ಧ ಮಾತುಗಳನ್ನು ನಿಲ್ಲಿಸಿ ಎಂದು ಗುಡುಗಿದರು.

Dailyhunt
Disclaimer: This content has not been generated, created or edited by Dailyhunt. Publisher: Hosadigantha