Dailyhunt Logo
  • Light mode
    Follow system
    Dark mode
    • Play Story
    • App Story
ದೀದಿ ಕೋಟೆಯಲ್ಲಿ ಅರಳಲಿದೆ ಕಮಲ: ಬಂಗಾಳದಲ್ಲಿ ಬಿಜೆಪಿಗೆ ಪಟ್ಟ ಎಂದ ಟುಡೇಸ್‌ ಚಾಣಕ್ಯ!

ದೀದಿ ಕೋಟೆಯಲ್ಲಿ ಅರಳಲಿದೆ ಕಮಲ: ಬಂಗಾಳದಲ್ಲಿ ಬಿಜೆಪಿಗೆ ಪಟ್ಟ ಎಂದ ಟುಡೇಸ್‌ ಚಾಣಕ್ಯ!

Hosadigantha 1 month ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದು, ಪಶ್ವಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಟುಡೇಸ್‌ ಚಾಣಕ್ಯ ಭವಿಷ್ಯ ನುಡಿದಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಟುಡೇಸ್‌ ಚಾಣಕ್ಯ ನೀಡುವ ಭವಿಷ್ಯ ಹೆಚ್ಚಾಗಿ ನಿಖರತೆಯಿಂದ ಕೂಡಿರುತ್ತದೆ ಎಂಬ ಮಾತುಗಳಿದ್ದು, ಇದೀಗ ಬಂಗಾಳದಲ್ಲಿ ಬಿಜೆಪಿ 192 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಜೊತೆಗೆ ಮಿತ್ರ ಪಕ್ಷಗಳು 11 ಸ್ಥಾನಗಳಲ್ಲಿ ಜಯ ಕಾಣಲಿದೆ ಎಂದು ತಿಳಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಸವು ಈ ಬಾರಿ 100 ಸ್ಥಾನಗಳಲ್ಲಿ ಗೆದ್ದರೆ, ಮಿತ್ರ ಪಕ್ಷಗಳು 11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಇತರರು ಎರಡು, ಎರಡು ಸ್ಥಾನಗಳಿಗೆ ತೃಪ್ತಿಪಡಲಿದ್ದಾರೆ ಎಂದು ಅಂದಾಜಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha