Dailyhunt Logo
  • Light mode
    Follow system
    Dark mode
    • Play Story
    • App Story
ದೊಡ್ಡಣ್ಣನಿಗೆ ಇರಾನ್ 'ಕಪಾಳಮೋಕ್ಷ': ಸಂಧಾನದ ಮೇಜಿಗೆ ಬರಲ್ಲ ಎಂದ ಇಸ್ಲಾಮಿಕ್ ರಾಷ್ಟ್ರ

ದೊಡ್ಡಣ್ಣನಿಗೆ ಇರಾನ್ 'ಕಪಾಳಮೋಕ್ಷ': ಸಂಧಾನದ ಮೇಜಿಗೆ ಬರಲ್ಲ ಎಂದ ಇಸ್ಲಾಮಿಕ್ ರಾಷ್ಟ್ರ

Hosadigantha 6 months ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಅಮೆರಿಕದ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಹೊಡೆಯುತ್ತಿವೆ. ವಿಶ್ವದ ಬಲಾಢ್ಯ ಶಕ್ತಿ ಎಂಬ ಅಹಂನಲ್ಲಿ ಇರಾನ್ ಆಡಳಿತವನ್ನು ಬದಲಿಸಲು ಹೋದ ಅಮೆರಿಕಕ್ಕೆ ಈಗ ಹೆಜ್ಜೆಹೆಜ್ಜೆಗೂ ಮುಖಭಂಗವಾಗುತ್ತಿದೆ.

ಇರಾನ್ ಒಡ್ಡುತ್ತಿರುವ ಪ್ರಬಲ ಪ್ರತಿರೋಧದಿಂದಾಗಿ ಅಮೆರಿಕದ ಮಿಲಿಟರಿ ಅಧಿಕಾರಿಗಳೇ ಬಲಿಯಾಗುತ್ತಿದ್ದು, ಅಮೆರಿಕ ಅಕ್ಷರಶಃ ಕಂಗೆಟ್ಟು ಹೋಗಿದೆ.

ಇತ್ತೀಚಿನ ಬೆಳವಣಿಗೆಯಾಗಿ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಜೊತೆ ಕದನ ವಿರಾಮದ ಮಾತುಕತೆ ನಡೆಸಲು ಅಮೆರಿಕ ಮುಂದಾಗಿತ್ತು. ಆದರೆ, "ನಾವು ಅಮೆರಿಕದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಸಿದ್ಧವಿಲ್ಲ" ಎಂದು ಇರಾನ್ ಖಡಾಖಡಿಯಾಗಿ ಹೇಳುವ ಮೂಲಕ ಅಮೆರಿಕಕ್ಕೆ ಮತ್ತೊಂದು 'ಕಪಾಳಮೋಕ್ಷ' ಮಾಡಿದೆ.

ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಬೆಳವಣಿಗೆಗಳ ಬಗ್ಗೆಯೂ ಇರಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಮೂಲಕ ಅಮೆರಿಕ ಮಾತ್ರವಲ್ಲದೆ, ಮಧ್ಯಸ್ಥಿಕೆ ವಹಿಸಿ ಬೀಗುತ್ತಿದ್ದ ಪಾಕಿಸ್ತಾನಕ್ಕೂ ಜಾಗತಿಕ ಮಟ್ಟದಲ್ಲಿ ಭಾರಿ ಮುಖಭಂಗವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha