Dailyhunt
ಹಾರ್ಮುಜ್ ಜಲಸಂಧಿ ತೆರೆಯಲು 48 ಗಂಟೆಗಳ ಡೆಡ್ ಲೈನ್: ಇರಾನ್ ಗೆ ಭೀಕರ ದಾಳಿಯ ಎಚ್ಚರಿಕೆ ಕೊಟ್ಟ ಟ್ರಂಪ್!

ಹಾರ್ಮುಜ್ ಜಲಸಂಧಿ ತೆರೆಯಲು 48 ಗಂಟೆಗಳ ಡೆಡ್ ಲೈನ್: ಇರಾನ್ ಗೆ ಭೀಕರ ದಾಳಿಯ ಎಚ್ಚರಿಕೆ ಕೊಟ್ಟ ಟ್ರಂಪ್!

Hosadigantha 2 weeks ago

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾನ್ ಹಿಡಿತದಲ್ಲಿರುವ ಹಾರ್ಮುಜ್ ಜಲಸಂಧಿಯನ್ನುತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರಸಾಹಸ ಪಡುತ್ತಿದ್ದು, ಇದೀಗ ಮತ್ತೊಮ್ಮೆ 48 ಗಂಟೆಗಳ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಟ್ರಂಪ್ ,ಇರಾನ್‌ಗೆ ನೀಡಿದ್ದ ಗಡುವು 48 ಗಂಟೆಗಳಲ್ಲಿ ಮುಕ್ತಾಯಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ: ಓರ್ವ ಸಿಬ್ಬಂದಿ ಸಾವು

ಇರಾನ್‌ಗೆ ಜಲಸಂಧಿಯನ್ನು ತೆರೆಯಲು10 ದಿನಗಳ ಅಂತಿಮ ಗಡುವು ನೀಡಿದ್ದೆ. ಆದರೆ ಸಮಯ ಉರುಳುತ್ತಿದ್ದು, ಇನ್ನೂ ಕೇವಲ 48 ಗಂಟೆಗಳು ಮಾತ್ರ ಉಳಿದಿವೆ. ಈ ಸಮಯದಲ್ಲಿ, ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. ಇಲ್ಲದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha