Dailyhunt
ಹಾರ್ಮುಜ್‌ ಜಲಸಂಧಿಯಲ್ಲಿ ಯಾವುದೇ ಸುಂಕ ಹೇರುವಂತಿಲ್ಲ: ಇರಾನ್ ಗೆ ಒಮನ್ ತಿರುಗೇಟು!

ಹಾರ್ಮುಜ್‌ ಜಲಸಂಧಿಯಲ್ಲಿ ಯಾವುದೇ ಸುಂಕ ಹೇರುವಂತಿಲ್ಲ: ಇರಾನ್ ಗೆ ಒಮನ್ ತಿರುಗೇಟು!

Hosadigantha 3 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾನ್ ಮತ್ತು ಅಮೆರಿಕ ನಡುವಿನ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದ್ದು,ಇದರ ನಡುವೆ ನೆರೆಯ ದೇಶ ಒಮನ್ ಹಾರ್ಮುಜ್‌ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸುವ ಇರಾನ್‌ ನಿಲುವನ್ನು ವಿರೋಧಿಸಿದೆ.

ಟ್ರಂಪ್ ಮನವಿ ಮೇರೆಗೆ ಇರಾನ್ ಷರತ್ತುಬದ್ದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು , ಷರತ್ತಿನಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಇರಾನ್ ಮತ್ತು ಒಮಾನ್ ದೇಶಗಳು ಸಾರಿಗೆ ಶುಲ್ಕ ವಿಧಿಸಲಿವೆ ಎಂದಿತ್ತು.

ಆದರೆ, ಈ ನಿರ್ಧಾರಕ್ಕೆ ಒಮಾನ್ ವಿರೋಧಿಸಿದ್ದು, ಯಾವುದೇ ಹಡಗುಗಳಿಗೆ ನಾನು ಸುಂಕ ವಿಧಿಸುವುದಿಲ್ಲ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿದ ಓಮನ್‌ನ ಸಾರಿಗೆ ಸಚಿವ ಸಯ್ಯದ್ ಬಿನ್ ಹಮೌದ್ ಅಲ್-ಮವಾಲಿ, ಇಲ್ಲಿನ ಸುಲ್ತಾನರು ಜಲಸಂಧಿಯನ್ನು ದಾಟುವ ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಹೀಗಾಗಿ ಉಚಿತ ಮತ್ತು ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಓಮನ್‌ನ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಇರಾನ್ ಮತ್ತು ಓಮನ್ ನಡುವಿನ 34 ಕಿಲೋಮೀಟರ್ ಜಲಸಂಧಿಯನ್ನು ಅಂತಾರಾಷ್ಟ್ರೀಯ ಜಲಮಾರ್ಗವೆಂದು ಪರಿಗಣಿಸಲಾಗಿದ್ದು, ಹಿಂದೆ ಎರಡೂ ದೇಶಗಳು ಸುಂಕ ವಿಧಿಸಿರಲಿಲ್ಲ. ಈ ಮಾರ್ಗ ಜಾಗತಿಕ ತೈಲ ವ್ಯಾಪಾರದ ಸರಿಸುಮಾರು ಐದನೇ ಒಂದು ಭಾಗವನ್ನು ಸುಗಮಗೊಳಿಸುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha