Dailyhunt Logo
  • Light mode
    Follow system
    Dark mode
    • Play Story
    • App Story
ಹೃದಯಾಘಾತಕ್ಕೆ ಎದೆನೋವೇ ಬರಬೇಕಿಲ್ಲ: ದೇಹ ನೀಡುವ ಈ ಮುನ್ಸೂಚನೆಗಳನ್ನು ನಿರ್ಲಕ್ಷಿಸಬೇಡಿ

ಹೃದಯಾಘಾತಕ್ಕೆ ಎದೆನೋವೇ ಬರಬೇಕಿಲ್ಲ: ದೇಹ ನೀಡುವ ಈ ಮುನ್ಸೂಚನೆಗಳನ್ನು ನಿರ್ಲಕ್ಷಿಸಬೇಡಿ

Hosadigantha 1 hr ago

ಹೃದಯಾಘಾತ ಅಥವಾ ಹೃದಯ ಸಂಬಂಧಿ ತೊಂದರೆಗಳು ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಎದೆಯ ಮಧ್ಯಭಾಗದಲ್ಲಿ ಉಂಟಾಗುವ ತೀವ್ರವಾದ ನೋವು. ಆದರೆ, ಹೃದಯದ ತೊಂದರೆಗಳೆಲ್ಲವೂ ಎದೆನೋವಿನ ರೂಪದಲ್ಲೇ ಕಾಣಿಸಿಕೊಳ್ಳುತ್ತವೆ ಎಂಬುದು ಸಂಪೂರ್ಣ ತಪ್ಪು ಕಲ್ಪನೆ.

ಅದೆಷ್ಟೋ ಬಾರಿ ಹೃದಯ ತನ್ನ ನೋವನ್ನು ಎದೆಯ ಮೂಲಕ ವ್ಯಕ್ತಪಡಿಸದೆ, ದೇಹದ ಇತರ ಭಾಗಗಳ ಲಕ್ಷಣಗಳ ಮೂಲಕ 'ಸಂಕೇತಗಳನ್ನು' ರವಾನಿಸುತ್ತದೆ.

ಜನರಲ್ಲಿ ಈ ಕುರಿತು ಜಾಗೃತಿ ಇಲ್ಲದಿರುವುದರಿಂದ, ಅನೇಕರು ಈ ಲಕ್ಷಣಗಳನ್ನು ಸಾಮಾನ್ಯ ಗ್ಯಾಸ್ಟ್ರಿಕ್ ಅಥವಾ ಆಯಾಸವೆಂದು ನಿರ್ಲಕ್ಷಿಸಿ ಜೀವಕ್ಕೆ ಆಪತ್ತು ತಂದೊಡ್ಡಿಕೊಳ್ಳುತ್ತಿದ್ದಾರೆ.

ಅಪಾಯಕಾರಿ ಮುನ್ಸೂಚನೆಗಳು

ಯಾವುದೇ ಕಠಿಣ ಕೆಲಸ ಮಾಡದಿದ್ದರೂ ದಿಢೀರನೆ ವಿಪರೀತ ಆಯಾಸವಾಗುವುದು, ಮೈಯಲ್ಲಿ ಶಕ್ತಿಯೇ ಇಲ್ಲದಂತೆ ಭಾಸವಾಗುವುದು ಹೃದಯದ ದೌರ್ಬಲ್ಯದ ಸಂಕೇತವಾಗಿರಬಹುದು.

ಮೆಟ್ಟಿಲು ಹತ್ತುವಾಗ ಅಥವಾ ಸಣ್ಣಪುಟ್ಟ ಕೆಲಸ ಮಾಡುವಾಗಲೂ ವಿಪರೀತ ಉಸಿರು ಮುಡಿಯುವುದು, ಕೂತಿದ್ದರೂ ಉಸಿರಾಡಲು ಕಷ್ಟವಾಗುವುದು ಹೃದಯದ ಸಮಸ್ಯೆ ಇರುವುದನ್ನು ಸೂಚಿಸುತ್ತದೆ.

ಹೃದಯದ ನೋವು ಕೇವಲ ಎದೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಿಶೇಷವಾಗಿ ಎಡತೋಳು, ಎರಡೂ ತೋಳುಗಳು, ದವಡೆ, ಕುತ್ತಿಗೆ ಅಥವಾ ಬೆನ್ನಿನ ಮೇಲ್ಭಾಗದಲ್ಲಿ ನೋವು, ಅಸ್ವಸ್ಥತೆ ಅಥವಾ ಸೆಳೆತ ಕಾಣಿಸಿಕೊಂಡರೆ ಅದನ್ನು ತಕ್ಷಣವೇ ಗಮನಿಸಬೇಕು.

ಯಾವುದೇ ಶ್ರಮವಿಲ್ಲದೆ, ತಣ್ಣನೆಯ ವಾತಾವರಣದಲ್ಲೂ ಹಠಾತ್ತಾಗಿ ಮೈಯೆಲ್ಲಾ ಬೆವತು ಹೋಗುವುದು ಮತ್ತು ತಲೆಸುತ್ತುವುದು ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಅನೇಕರು ಹೃದಯಾಘಾತದ ಮುನ್ಸೂಚನೆಯನ್ನು 'ಗ್ಯಾಸ್ಟ್ರಿಕ್' ಅಥವಾ 'ಅಜೀರ್ಣ' ಎಂದು ಭಾವಿಸಿ ಗ್ಯಾಸ್ಟ್ರಿಕ್ ಮಾತ್ರೆ ತಗೊಂಡು ಸುಮ್ಮನಾಗುತ್ತಾರೆ. ಹೊಟ್ಟೆಯ ಮೇಲ್ಭಾಗದಲ್ಲಿ ಉರಿ, ವಾಕರಿಕೆ, ವಾಂತಿ ಅಥವಾ ಹೊಟ್ಟೆ ಉಬ್ಬರ ಕೂಡ ಹೃದಯದ ತೊಂದರೆಯ ಲಕ್ಷಣವಾಗಿರಬಹುದು.

ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ವಿಫಲವಾದಾಗ, ರಕ್ತನಾಳಗಳಲ್ಲಿ ದ್ರವ ಶೇಖರಣೆಯಾಗಿ ಕಾಲು ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳಬಹುದು.

ನಿಮ್ಮ ದೇಹ ನೀಡುವ ಸಣ್ಣ ಸಣ್ಣ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಎದೆನೋವು ಬರಲಿಲ್ಲ ಎಂದಮಾತ್ರಕ್ಕೆ ಹೃದಯ ಸುರಕ್ಷಿತವಾಗಿದೆ ಎಂದರ್ಥವಲ್ಲ. ಮೇಲೆ ತಿಳಿಸಿದ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಇಸಿಜಿ ಅಥವಾ ಅಗತ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

Dailyhunt
Disclaimer: This content has not been generated, created or edited by Dailyhunt. Publisher: Hosadigantha