Dailyhunt
ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ: ಓರ್ವ ಸಿಬ್ಬಂದಿ ಸಾವು

ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ: ಓರ್ವ ಸಿಬ್ಬಂದಿ ಸಾವು

Hosadigantha 2 weeks ago

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಇತ್ತ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಇರಾನ್‌ನಿಂದ ಮಾಹಿತಿ ಪಡೆದಿದ್ದು ,ಸ್ಥಾವರದ ಮುಖ್ಯ ಭಾಗಗಳಿಗೆ ಹಾನಿಯಾಗಿಲ್ಲ , ಹೀಗಾಗಿ ಯಾವುದೇ ರೀತಿಯ ವಿಕಿರಣ ಸೋರಿಕೆಯಾಗಿಲ್ಲ ಎಂದು ತಿಳಿಸಿದೆ.

ಇಲ್ಲಿನ ಭೌತಿಕ ರಕ್ಷಣಾ ಸಿಬ್ಬಂದಿಗಳಲ್ಲಿ ಒಬ್ಬರು ದಾಳಿಗೆ ಸಾವನ್ನಪ್ಪಿದ್ದಾರೆ ಮತ್ತು ಆದರೆ ಹತ್ತಿರದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಇಂಧನ ಸಂಸ್ಥೆ ಮಾಹಿತಿ ನೀಡಿದೆ.

ದೊಡ್ಡಣ್ಣನಿಗೆ ಇರಾನ್ 'ಕಪಾಳಮೋಕ್ಷ': ಸಂಧಾನದ ಮೇಜಿಗೆ ಬರಲ್ಲ ಎಂದ ಇಸ್ಲಾಮಿಕ್ ರಾಷ್ಟ್ರ

ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಮೂಲಸೌಕರ್ಯಗಳ ಮೇಲೆ ಸಂಭಾವ್ಯ ದಾಳಿಗಳನ್ನು ನಡೆಸುವುದಾಗಿ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭೀಕರ ದಾಳಿ ನಡೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha