Dailyhunt Logo
  • Light mode
    Follow system
    Dark mode
    • Play Story
    • App Story
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ: 60 ವರ್ಷಗಳ 'ಒಪೆಕ್' ನಂಟು ಕಳೆದುಕೊಂಡ ಯುಎಇ!

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ: 60 ವರ್ಷಗಳ 'ಒಪೆಕ್' ನಂಟು ಕಳೆದುಕೊಂಡ ಯುಎಇ!

Hosadigantha 3 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಳೆದ ಆರು ದಶಕಗಳಿಂದ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟದ ಪ್ರಬಲ ಸದಸ್ಯ ರಾಷ್ಟ್ರವಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್, ಇಂದು ಅಧಿಕೃತವಾಗಿ ಸಂಘಟನೆಯಿಂದ ಹೊರನಡೆದಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಹೊಸ ಆರ್ಥಿಕ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಪೆಕ್ ಎಂದರೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟ. 1960 ರಲ್ಲಿ ಇರಾಕ್‌ನ ಬಾಗ್ದಾದ್‌ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಪ್ರಸ್ತುತ ಆಸ್ಟ್ರಿಯಾದ ವಿಯೆನ್ನಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಒಕ್ಕೂಟವು, ಜಗತ್ತಿನ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಸರಿಸುಮಾರು ಶೇ 38ಕ್ಕಿಂತ ಹೆಚ್ಚಿನ ಪಾಲನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವನ್ನು ನಿಯಂತ್ರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಯುಎಇ ತನ್ನ 60 ವರ್ಷಗಳ ಹಳೆಯ ಸಂಬಂಧವನ್ನು ಕಡಿದುಕೊಳ್ಳಲು ಕೆಲವು ಗಂಭೀರ ಕಾರಣಗಳಿವೆ:

ಒಪೆಕ್ ವಿಧಿಸುವ ತೈಲ ಉತ್ಪಾದನಾ ಮಿತಿಯು ಯುಎಇಯ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂಬುದು ದುಬೈ ಆಡಳಿತದ ಪ್ರಮುಖ ದೂರು.

ತನ್ನ ದೇಶದ ತೈಲ ನೀತಿಯಲ್ಲಿ ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಯುಎಇ ಈ ಕ್ರಮ ಕೈಗೊಂಡಿದೆ.

ಪ್ರಾದೇಶಿಕ ರಾಜಕೀಯ ಮತ್ತು ಇರಾನ್ ವಿಷಯದಲ್ಲಿ ಒಕ್ಕೂಟದ ಇತರ ಸದಸ್ಯರೊಂದಿಗೆ ಇರುವ ಭಿನ್ನಾಭಿಪ್ರಾಯಗಳು ಕೂಡ ಈ ನಿರ್ಗಮನಕ್ಕೆ ಪುಷ್ಟಿ ನೀಡಿವೆ.

ಯುಎಇ ನಿರ್ಗಮನದಿಂದಾಗಿ ಒಪೆಕ್ ಒಕ್ಕೂಟದ ಹಿಡಿತ ಸಡಿಲವಾಗಬಹುದು. ಇದು ಕಚ್ಚಾ ತೈಲ ಬೆಲೆಯಲ್ಲಿ ಅಸ್ಥಿರತೆಯನ್ನು ತರಬಹುದು ಅಥವಾ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ ತೈಲ ಬೆಲೆ ಇಳಿಕೆಯಾಗಲೂಬಹುದು. ಮುಂದಿನ ದಿನಗಳಲ್ಲಿ ಇತರ ತೈಲ ರಾಷ್ಟ್ರಗಳು ಕೂಡ ಇಂತಹುದೇ ಹಾದಿ ಹಿಡಿಯುತ್ತವಾ ಎಂಬ ಆತಂಕ ಸೃಷ್ಟಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha