Dailyhunt Logo
  • Light mode
    Follow system
    Dark mode
    • Play Story
    • App Story
ಮದ್ಯದಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ; ಚೂರಿ ಇರಿತದಿಂದ ಓರ್ವ ಗಂಭೀರ

ಮದ್ಯದಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ; ಚೂರಿ ಇರಿತದಿಂದ ಓರ್ವ ಗಂಭೀರ

Hosadigantha 1 day ago

ಹೊಸದಿಗಂತ ವರದಿ ಮಡಿಕೇರಿ:

ಮದ್ಯದ ಅಂಗಡಿಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ‌ ಕಾರಣಕ್ಕೆ ನಡೆದ ಜಗಳ ಚೂರಿ ಇರಿತದೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡ ಘಟನೆ ಪೊನ್ನಂಪೇಟೆಯಲ್ಲಿ ಶನಿವಾರ ಸಂಜೆ ಜರುಗಿದೆ.

ಘಟನೆಯಲ್ಲಿ ತೂಚಮಕೇರಿಯ ಸಿ.ದೀಪು (46) ಎಂಬವರು ಗಂಭೀರವಾಗಿ ಗಾಯಗೊಂಡು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಪೊನ್ನಂಪೇಟೆಯ ಮದ್ಯದ ಅಂಗಡಿಯೊಂದರಲ್ಲಿ ಹರಿಹರ ಗ್ರಾಮದ ಎಂ.ಕಾಳಪ್ಪ ಹಾಗೂ ತೂಚಮಕೇರಿಯ ಸಿ.ದೀಪು ಎಂಬವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಏರ್ಪಟ್ಟಿದೆ. ಈ ಸಂದರ್ಭ ಕಾಳಪ್ಪ, ತನ್ನ ಬಳಿ ಇದ್ದ ಚಾಕುವಿನಿಂದ ಸಿ.ದೀಪುವಿನ ಹಣೆ, ಹೊಟ್ಟೆ ,ತೋಳು ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿರುವುದಾಗಿ ಹೇಳಲಾಗಿದೆ.

ರವಿ ಹಂಜ್ ಬೆಂಗಳೂರು ಪೊಲೀಸರ ವಶಕ್ಕೆ: ಬೆಳಗಾವಿಯಲ್ಲಿ ವಿಚಾರಣೆ ಬಳಿಕ ಬಂಧನ ಸಾಧ್ಯತೆ

ದೇಹದ ಆರು ಭಾಗಗಳಿಗೆ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ದೀಪು ಅವರಿಗೆ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha