Dailyhunt Logo
  • Light mode
    Follow system
    Dark mode
    • Play Story
    • App Story
ಮಕ್ಕಳು ಮಲಗಿದ್ದ ಚಾಪೆಯಡಿಯಲ್ಲೇ ಇದ್ದ ಬೃಹತ್‌ ನಾಗರಹಾವು, ಮೈ ಜುಂ ಎನಿಸುವ ಘಟನೆ

ಮಕ್ಕಳು ಮಲಗಿದ್ದ ಚಾಪೆಯಡಿಯಲ್ಲೇ ಇದ್ದ ಬೃಹತ್‌ ನಾಗರಹಾವು, ಮೈ ಜುಂ ಎನಿಸುವ ಘಟನೆ

Hosadigantha 2 weeks ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೆಯ ಹೊರಗಡೆ ಹಾವು ಇದೆಯಾ? ಶೂ ಚಪ್ಪಲಿ ಒಳಗೆ ಏನಾದರೂ ಹಾವುಗಳಿ ಸೇರಿದೆಯಾ ಎಂದು ಜಾಗರೂಕವಾಗಿರುವ ಪೋಷಕರಿಗೆ ಮಕ್ಕಳು ಮಲಗಿರುವ ಚಾಪೆಯಲ್ಲೇ ಹಾವೂ ಇದೆ ಎಂದು ಗೊತ್ತಾದಾಗ ಜೀವ ಝಲ್‌ ಎಂದಿರಬಹುದು!

ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟಿಯ ಬಳಿಯ ಗುಡ್ಡದಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಚಾಪೆ ಹಾಸಿಕೊಂಡು ಬೆಚ್ಚನೆಯ ಬೆಡ್‌ಶೀಟ್‌ ಹೊದ್ದುಕೊಂಡು ನೆಮ್ಮದಿಯಾಗಿ ಮಲಗಿದ್ದ ಮಕ್ಕಳು ಅದೃಷ್ಟವಶಾತ್‌ ಬಚಾವ್‌ ಆಗಿದ್ದಾರೆ. ಚಾಪೆಯ ಅಡಿಗೆ ನಾಗರಹಾವೊಂದು ಅಡಗಿದ್ದನ್ನು ಪೋಷಕರು ನೋಡಿದ್ದಾರೆ. ಅವರಿಗೆ ಭಯವಾಗಿದ್ದು, ತಕ್ಷಣವೇ ಉರಗ ರಕ್ಷಕರಾದ ಪ್ರಶಾಂತ್ಗೆ ಕರೆ ಮಾಡಿದ್ದಾರೆ.

ಪ್ರಶಾಂತ್‌ ತಮ್ಮ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. ಉರಗ ರಕ್ಷಕರ ಸಕಾಲಿಕ ಸ್ಪಂದನೆಯಿಂದಾಗಿ ಪುಟ್ಟ ಮಕ್ಕಳು ಜೀವಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೋಷಕರು ಪ್ರಶಾಂತ್‌ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಶಾಂತ್‌ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha