Dailyhunt
ನಟ ವಿಜಯ್ ಗೆ ಶಾಕ್: ಚುನಾವಣೆಗೂ ಮುನ್ನವೇ ಒಂದು ಕ್ಷೇತ್ರ ಕಳೆದುಕೊಂಡ ಟಿವಿಕೆ!

ನಟ ವಿಜಯ್ ಗೆ ಶಾಕ್: ಚುನಾವಣೆಗೂ ಮುನ್ನವೇ ಒಂದು ಕ್ಷೇತ್ರ ಕಳೆದುಕೊಂಡ ಟಿವಿಕೆ!

Hosadigantha 3 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿಕೊಂಡಿದೆ.

ಅದರಲ್ಲೂ ಈ ಬಾರಿ ತಮಿಳುನಾಡು ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದ್ದು, .ಡಿಎಂಕೆ, ಎಐಡಿಎಂಕೆ ಮೈತ್ರಿಗೆ ಪೈಪೋಟಿ ನೀಡಲು ನಟ ವಿಜಯ್ ಪಾರ್ಟಿ ಟಿವಿಕೆ ಸ್ಪರ್ದಿಸುತ್ತಿದೆ.

ಈಗಾಗಲೇ ಎಲ್ಲಾ ಕಡೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಗೆಲುವಿನ ಹುಮಸ್ಸಿನಲ್ಲಿ ಇರುವ ವಿಜಯ್ ಗೆ ಮೊದಲ ಹಿನ್ನಡೆಯಾಗಿದ್ದು, ಮತದಾನ ನಡೆಯುವ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ.

ತಮಿಳುನಾಡಿನ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಪಕ್ಷದಿಂದ ಅರುಣ್ ಕುಮಾರ್ ಎಂ ನಾಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ತಿರಸ್ಕೃತಗೊಂಡಿದೆ. ಹೀಗಾಗಿ ಮತದಾನದ ಮೊದಲೇ ಮೊದಲು ಸೋಲು ಕಂಡಂತಾಗಿದೆ.

ಪ್ರಮುಖ ಕೈಗಾರಿಕಾ ವಲಯಗಳಿಗೆ ಶೇ. 70 ರಷ್ಟು ಎಲ್‌ಪಿಜಿ ಹಂಚಿಕೆ: ರಾಜ್ಯಗಳಿಗೆ ಕೇಂದ್ರ ಸರಕಾರ ಪತ್ರ

ಟಿವಿಕೆ ಪಕ್ಷದ ಅರುಣ್ ಕುಮಾರ್ ಅವರ ಸಹಿ ವಿಚಾರದಲ್ಲಿ ನಾಪತ್ರ ತಿರಸ್ಕೃತವಾಗಿದೆ. ಇತ್ತ ಎರಡನೇ ಅಭ್ಯರ್ಥಿಯಾಗಿ ನಿತ್ಯಾ ಅವರನ್ನು ಟಿವಿಕೆ ಕಳಣಕ್ಕಿಳಿಸಿತ್ತು. ಆದರೆ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.ಪ್ರತಿ ನಾಮಪತ್ರದಲ್ಲಿ ಕನಿಷ್ಠ 10 ಮಂದಿ ಸಹಿ ಹಾಕಿರಬೇಕು. ಆದರೆ ಎರಡು ಮಂದಿಯ ನಾಮಪತ್ರದಲ್ಲಿ 7 ಮಂದಿ ಸಹಿ ಹಾಕಿದ್ದು, ಜೊತೆಗೆ ಪ್ರಮುಖ ಮಾಹಿತಿ ಭರ್ತಿ ಮಾಡದ ಕಾರಣ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕೃತಗೊಳಿಸಿದೆ.

ಎಜಪ್ಪಾಡಿ ವಿಧಾನಸಭಾ ಕ್ಷೇತ್ರ ತಮಿಳುನಾಡು ಮಾಜಿ ಮುಖ್ಯಮಂತ್ರಿ,ಎಡಪ್ಪಾಡಿ ಕೆ ಪಳನಿ ಅವರ ಭದ್ರಕೋಟೆಯಾಗಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಇದೀಗ ಚುನಾವಣೆಗೂ ಮೊದಲೆ ಟಿಕೆಟ್ ಪಕ್ಷದ ಒಂದು ವಿಕೆಟ್ ಉರುಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha