Dailyhunt Logo
  • Light mode
    Follow system
    Dark mode
    • Play Story
    • App Story
ನೀಟ್ ಮರುಪರೀಕ್ಷೆಗೆ ಕೌಂಟ್‌ಡೌನ್ ಶುರು: ವಿದ್ಯಾರ್ಥಿಗಳೇ ಈ ರೂಲ್ಸ್ ನೆನಪಿನಲ್ಲಿಟ್ಕೊಳಿ

ನೀಟ್ ಮರುಪರೀಕ್ಷೆಗೆ ಕೌಂಟ್‌ಡೌನ್ ಶುರು: ವಿದ್ಯಾರ್ಥಿಗಳೇ ಈ ರೂಲ್ಸ್ ನೆನಪಿನಲ್ಲಿಟ್ಕೊಳಿ

Hosadigantha 11 hrs ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೂನ್ 21ರಂದು ನಡೆಯಲಿರುವ ನೀಟ್-ಯುಜಿ 2026 ಮರುಪರೀಕ್ಷೆಗೆ ಸಂಬಂಧಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹಲವು ಕಡ್ಡಾಯ ನಿಯಮಗಳನ್ನು ಪ್ರಕಟಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡದ ಉದ್ದೇಶದಿಂದ ಡ್ರೆಸ್ ಕೋಡ್ ಹಾಗೂ ಕೊಂಡೊಯ್ಯಬಹುದಾದ ವಸ್ತುಗಳ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಈ ದಾಖಲೆಗಳು ಕಡ್ಡಾಯ

ಪರೀಕ್ಷಾರ್ಥಿಗಳು ಅಡ್ಮಿಟ್ ಕಾರ್ಡ್‌ನ ಮುದ್ರಿತ ಪ್ರತಿ, ಸರ್ಕಾರ ನೀಡಿದ ಮೂಲ ಗುರುತಿನ ಚೀಟಿ ಹಾಗೂ ಹೆಚ್ಚುವರಿ ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಕುಡಿಯುವ ನೀರಿಗಾಗಿ ಪಾರದರ್ಶಕ ಬಾಟಲಿಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ವಸ್ತುಗಳಿಗೆ ಸಂಪೂರ್ಣ ನಿಷೇಧ

ಮೊಬೈಲ್, ಸ್ಮಾರ್ಟ್ ವಾಚ್, ಇಯರ್‌ಫೋನ್, ಬ್ಲೂಟೂತ್ ಸಾಧನಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶವಿಲ್ಲ. ಪರ್ಸ್, ಬ್ಯಾಗ್, ಬೆಲ್ಟ್, ಕ್ಯಾಪ್ ಹಾಗೂ ಯಾವುದೇ ರೀತಿಯ ಆಭರಣಗಳನ್ನೂ ನಿಷೇಧಿಸಲಾಗಿದೆ.

ಡ್ರೆಸ್ ಕೋಡ್ ಪಾಲನೆ ಕಡ್ಡಾಯ

ಅಭ್ಯರ್ಥಿಗಳು ತಿಳಿ ಬಣ್ಣದ ಅರ್ಧ ತೋಳಿನ ಉಡುಪು ಧರಿಸಬೇಕು. ದೊಡ್ಡ ಬಟನ್‌ಗಳು ಅಥವಾ ದೊಡ್ಡ ಜೇಬುಗಳಿರುವ ಬಟ್ಟೆಗಳನ್ನು ಧರಿಸಬಾರದು. ಸಂಪೂರ್ಣ ಮುಚ್ಚಿದ ಶೂಗಳಿಗೆ ಅವಕಾಶವಿಲ್ಲ. ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಪು ಧರಿಸುವವರು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಸೂಚಿಸಲಾಗಿದೆ.

ಪೆನ್ ಕೂಡ ಕೇಂದ್ರದಲ್ಲೇ

ಪರೀಕ್ಷೆಗೆ ಅಗತ್ಯವಿರುವ ಪೆನ್ನನ್ನು ಎನ್‌ಟಿಎ ವತಿಯಿಂದ ಪರೀಕ್ಷಾ ಕೇಂದ್ರದಲ್ಲೇ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸ್ಟೇಷನರಿ ವಸ್ತುಗಳನ್ನು ತರಬಾರದು ಎಂದು ಸೂಚಿಸಲಾಗಿದೆ.

ಸಮಯ ಪಾಲನೆಗೆ ಆದ್ಯತೆ

ಪ್ರವೇಶ ಪತ್ರದಲ್ಲಿ ನಮೂದಿಸಿರುವ ವರದಿ ಸಮಯಕ್ಕೆ ಅಭ್ಯರ್ಥಿಗಳು ಹಾಜರಾಗಬೇಕು. ಪರೀಕ್ಷೆ ಆರಂಭಕ್ಕೂ ಮುನ್ನವೇ ಮುಖ್ಯ ಗೇಟ್ ಮುಚ್ಚಲಾಗುವುದರಿಂದ ತಡವಾಗಿ ಬರುವವರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಎನ್‌ಟಿಎ ಎಚ್ಚರಿಕೆ ನೀಡಿದೆ.

ವಸ್ತುಗಳ ಸುರಕ್ಷತೆಗೆ ವ್ಯವಸ್ಥೆ ಇಲ್ಲ

ಪರೀಕ್ಷಾ ಕೇಂದ್ರಗಳಲ್ಲಿ ವೈಯಕ್ತಿಕ ವಸ್ತುಗಳನ್ನು ಇಡಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ನಿಷೇಧಿತ ವಸ್ತುಗಳನ್ನು ಮನೆಲ್ಲೇ ಬಿಟ್ಟು ಬರುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha