Dailyhunt Logo
  • Light mode
    Follow system
    Dark mode
    • Play Story
    • App Story
ನೂರು ದಿನಗಳನ್ನು ಪೂರೈಸಿದ ಡಿಕೆಶಿ ಸರ್ಕಾರ: ಮೂರು ಹೊಸ ಯೋಜನೆಗಳ ಘೋಷಣೆ?

ನೂರು ದಿನಗಳನ್ನು ಪೂರೈಸಿದ ಡಿಕೆಶಿ ಸರ್ಕಾರ: ಮೂರು ಹೊಸ ಯೋಜನೆಗಳ ಘೋಷಣೆ?

Hosadigantha 1 hr ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಳೆಗೆ ನೂರು ದಿನಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಸಿಎಂ ಮೂರು ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.

ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸರಳ ಕಾರ್ಯಕ್ರಮವೊಂದನ್ನು ಬೆಳಗ್ಗೆ 10:30 ಕ್ಕೆ ಆಯೋಜಿಸಲಾಗಿದೆ.

ಇಲ್ಲಿ ನೂರು ದಿನಗಳ ಸಿಎಂ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸರ್ಕಾರದ ಯೋಜನೆಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವರ ಜತೆ ಸಿಎಂ ಸಂವಾದ ನಡೆಸಲಿದ್ದಾರೆ. ನಮ್ಮ ಗ್ಯಾರಂಟಿಗಳು ನಿಮ್ಮ ಜೀವನವನ್ನು ಹೇಗೆ ಬದಲಾಯಿಸಿವೆ? ಆರ್ಥಿಕ ಸಹಾಯದಿಂದ ಏನೆಲ್ಲಾ ಆಗಿದೆ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.

ಮಹಿಳೆಯರು, ಯುವಕರು ಹಾಗೂ ರೈತರನ್ನು ಗಮನದಲ್ಲಿ ಇಟ್ಟುಕೊಂಡು ಸಿಎಂ ಶಿವಕುಮಾರ್‌ ಮೂರು ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಸಿಎಂ ಆದ ನಂತರದಿಂದ ಏನೆಲ್ಲಾ ಬದಲಾವಣೆಗಳು ಬಂದಿವೆ, ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಲಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha