Dailyhunt Logo
  • Light mode
    Follow system
    Dark mode
    • Play Story
    • App Story
ಪಕ್ಷದೊಳಗಿನ ಬಂಡಾಯಕ್ಕೆ ಬ್ರೇಕ್: ಇಬ್ಬರು ಶಾಸಕರ ವಿರುದ್ಧ ಟಿಎಂಸಿ ಆಕ್ಷನ್

ಪಕ್ಷದೊಳಗಿನ ಬಂಡಾಯಕ್ಕೆ ಬ್ರೇಕ್: ಇಬ್ಬರು ಶಾಸಕರ ವಿರುದ್ಧ ಟಿಎಂಸಿ ಆಕ್ಷನ್

Hosadigantha 3 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದ ಭುಗಿಲೆದ್ದಿದ್ದು, ನಕಲಿ ಸಹಿ ಆರೋಪದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ತನ್ನ ಇಬ್ಬರು ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಕಾರಣ ನೀಡಿ ಸಂದೀಪನ್ ಸಹಾ ಹಾಗೂ ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ.

ಸಹಿ ದುರ್ಬಳಕೆ ಆರೋಪದಿಂದ ಆರಂಭವಾದ ವಿವಾದ

ವಿಧಾನಸಭೆಯ ನಾಯಕತ್ವಕ್ಕೆ ಸಂಬಂಧಿಸಿದ ಬೆಂಬಲ ಪತ್ರದಲ್ಲಿ ತಮ್ಮ ಹೆಸರಿನ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಇಬ್ಬರು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆರೋಪ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ:

ಜಿಹಾದ್ ಜಾಲದ ಸುಳಿವು: ಯುವಕರಿಗೆ ತರಬೇತಿ, ರಾಜಕೀಯ ನಾಯಕರೇ ಟಾರ್ಗೆಟ್?

ಶಾಸಕರ ವಿರುದ್ಧ ಟಿಎಂಸಿ ಆರೋಪ ಏನು?

ಪಕ್ಷದ ಪ್ರಕಟಣೆಯ ಪ್ರಕಾರ, ಇಬ್ಬರು ಶಾಸಕರು ಹಲವು ಸಭೆಗಳಿಂದ ದೂರ ಉಳಿದಿದ್ದರು. ಜೊತೆಗೆ ಪಕ್ಷದ ನಿಲುವಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘಟನೆಯ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ವಿರುದ್ಧವಲ್ಲ, ಟಿಎಂಸಿ ವಿರುದ್ಧವೇ ಆರೋಪ

ಈ ಬೆಳವಣಿಗೆ ಕುರಿತು ಮಾತನಾಡಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ನಕಲಿ ಸಹಿ ಆರೋಪವನ್ನು ಸ್ವತಃ ಟಿಎಂಸಿ ಶಾಸಕರೇ ಮುಂದಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಪಕ್ಷದೊಳಗಿನ ಅಸಮಾಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ. ನಕಲಿ ಸಹಿ ಆರೋಪ ಮತ್ತು ಉಚ್ಚಾಟನೆ ಕ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha