Dailyhunt Logo
  • Light mode
    Follow system
    Dark mode
    • Play Story
    • App Story
ಪೆಟ್ರೋಲ್‌ ಹಾಕ್ತಿದ್ದ ಮಹಿಳೆ ಕೈಯಲ್ಲಿದ್ದ 13 ಸಾವಿರ ರೂಪಾಯಿ ಹಣವನ್ನು ಕಸಿದುಕೊಂಡು ಪರಾರಿ!

ಪೆಟ್ರೋಲ್‌ ಹಾಕ್ತಿದ್ದ ಮಹಿಳೆ ಕೈಯಲ್ಲಿದ್ದ 13 ಸಾವಿರ ರೂಪಾಯಿ ಹಣವನ್ನು ಕಸಿದುಕೊಂಡು ಪರಾರಿ!

Hosadigantha 1 week ago

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪೆಟ್ರೋಲ್‌ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡು ನಂತರ ಪೆಟ್ರೋಲ್‌ ಹಾಕುತ್ತಿದ್ದ ಮಹಿಳೆ ಕೈಯಲ್ಲಿದ್ದ 13,000 ಸಾವಿರ ರೂಪಾಯಿಯನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಿಡದಿಯ ಕಾಡುಮನೆ ಕ್ರಾಸ್‌ ಬಳಿ ನಡೆದಿದೆ.

ಕಾಡುಮನೆ ಕ್ರಾಸ್ ಬಳಿಯ ಕೋಕೋ ಬಿಡದಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಕೇರಳ ರಾಜ್ಯದ ನೋಂದಣಿಯ ಕೆಂಪು ಬಣ್ಣದ ಸ್ವಿಫ್ಟ್ ಕಾರು ಚಾಲಕ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ಬಂದಿದ್ದರು. ಈ ವೇಳೆ ಬಂಕ್‌ ಸಿಬ್ಬಂದಿ ಉಷಾ ಪೆಟ್ರೋಲ್‌ ಹಾಕುತ್ತಿದ್ದರು. ಅವರ ಬಳಿ ವ್ಯಕ್ತಿ ಎರಡು ಸಾವಿರ ರೂಪಾಯಿಗೆ ಪೆಟ್ರೋಲ್‌ ಹಾಕಲು ಹೇಳಿದ್ದ. ಪೆಟ್ರೋಲ್ ಹಾಕಿದ ನಂತರ ಪೋನ್ ಪೇ ಮಾಡುವುದಾಗಿ ಹೇಳಿ ಸ್ಕ್ಯಾನ್ ಮಾಡಿದ್ದ. ಆದರೆ ಆಗದ ಕಾರಣ ಸ್ನೇಹಿತನ ಮೊಬೈಲ್ ನಿಂದ ಹಣ ಹಾಕಿಸುವುದಾಗಿ ಸ್ಕ್ಯಾನ್ ಫೋಟೋ ತಗೆದುಕೊಂಡು ಕಳುಹಿಸಿದ್ದ. ಫೋನ್‌ಪೆ ವರ್ಕ್‌ ಆಗ್ತಾ ಇಲ್ಲ ಕ್ಯಾಶ್‌ ಕೊಡ್ತೀನಿ ಎಂದು ಜೇಬಿಗೆ ಕೈ ಹಾಕಿದ್ದಾನೆ. ನಂತರ ಉಷಾ ಅವರ ಜೇಬಿನಲ್ಲಿದ್ದ ಹಣವನ್ನು ಎಗರಿಸಿದ್ದಾನೆ.

ಅವನು ಕಾರಿನ ಇಗ್ನಿಷನ್ ಆನ್ ನಲ್ಲಿ ಇಟ್ಟಿದ್ದ. ಅಟೆಂಡರ್ ಇತರ ವಾಹನಗಳಿಗೆ ಇಂಧನ ತುಂಬಿಸುತ್ತಿದ್ದಾಗ, ಆರೋಪಿ ಆಕೆಯ ಕೈಯಲ್ಲಿದ್ದ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha