Dailyhunt Logo
  • Light mode
    Follow system
    Dark mode
    • Play Story
    • App Story
ಪುಣೆಯಲ್ಲಿ ಮಳೆರಾಯನ ಅಟ್ಟಹಾಸ: ಕಟ್ಟಡದ ಮೇಲೆ ಕುಸಿದ ಕಸದ ಗುಡ್ಡ, 15ಕ್ಕೂ ಹೆಚ್ಚು ಜನ ನಾಪತ್ತೆ!

ಪುಣೆಯಲ್ಲಿ ಮಳೆರಾಯನ ಅಟ್ಟಹಾಸ: ಕಟ್ಟಡದ ಮೇಲೆ ಕುಸಿದ ಕಸದ ಗುಡ್ಡ, 15ಕ್ಕೂ ಹೆಚ್ಚು ಜನ ನಾಪತ್ತೆ!

Hosadigantha 3 days ago

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾರಾಷ್ಟ್ರದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್‌ನ 'ಮೋಶಿ' ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಸದ ದೊಡ್ಡ ಗುಡ್ಡವೊಂದು ಕಚೇರಿ ಕಟ್ಟಡದ ಮೇಲೆ ಕುಸಿದು ಬಿದ್ದಿದ್ದರಿಂದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿದೆ.

ಘಟನೆಯ ವೇಳೆ ಕಚೇರಿಯ ಒಳಗಿದ್ದ ಖಾಸಗಿ ಕಂಪನಿಯ ಕನಿಷ್ಠ 16 ಉದ್ಯೋಗಿಗಳು ಅವಶೇಷಗಳಡಿ ಸಿಲುಕಿದ್ದಾರೆ.

ಚುರುಕಾದ ರಕ್ಷಣಾ ಕಾರ್ಯಾಚರಣೆ:

ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಮಣ್ಣು ಮತ್ತು ಕಸದ ಅವಶೇಷಗಳನ್ನು ತೆರವುಗೊಳಿಸಿ ಜನರನ್ನು ಹೊರತೆಗೆಯುವ ಕೆಲಸ ಪ್ರಗತಿಯಲ್ಲಿದೆ.

ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ

ಅಧಿಕಾರಿಗಳ ಹೇಳಿಕೆ:

ಮೋಶಿಯ ಕಸದ ಡಿಪೋ ಪಕ್ಕದಲ್ಲೇ ಈ ಆಡಳಿತ ಕಚೇರಿ ಇತ್ತು. ಮೇಲ್ನೋಟಕ್ಕೆ ನಿರಂತರ ಮಳೆಯಿಂದಾಗಿ ಕಸದ ಬೆಟ್ಟ ಕುಸಿದು ಕಟ್ಟಡದ ಮೇಲೆ ಬಿದ್ದಿರುವುದು ಕಂಡುಬಂದಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha